ವರದಿ ರಾಣಿ ಪ್ರಸನ್ನ
ಕೊಲ್ಲಹಳ್ಳಿ ಅಂಡರ್ ಪಾಸಿಂಗ್ ಒಳಗೆ ಹಾದಿ ಹೋಗುವ ಹತ್ತಿರ ನ್ಯಾಷನಲ್ ಹೈವೇ ಅವರು ಅಂಡರ್ ಪಾಸಿಂಗ್ ಒಳಗೆ ದೀಪ ಇಲ್ಲದೆ ಕಗ್ಗತ್ತಲಿನಲ್ಲಿ ಜನರ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಒದಗಿದೆ ಎಂದು ಕರವೇ ರಮೇಶ್ ಪೂಜಾರಿ ತಿಳಿಸಿದ್ದಾರೆ..
ಹೈ ಮಾಸ್ಕ್ ಅನ್ನು ನಾಮಕವಸ್ತೆಗೆ ಅಳವಡಿಸಲಾಗಿದ್ದು ಅದು ಕೂಡ ಯಾವುದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಂಡರ್ ಪಾಸಿಂಗ್ ಪಕ್ಕ ಹಂಪ್ಸ್ ಅಳವಡಿಸಿದ್ದು ಅದಕ್ಕೆ ಯಾವುದೇ ಪ್ರಕಾರದ ಬಣ್ಣ ಅಥವಾ ಸೂಚನಾ ಫಲಕ, ಹಾಗೂ ಸೈಡ್ ವಿಂಗ್ ಮಿರರ್ ಅನ್ನು ಅಳವಡಿಸದೆ ಈಗಾಗಲೇ ತುಂಬಾ ಅಪಘಾತವಾಗಿದ್ದು ಈ ಕೂಡಲೇ ನ್ಯಾಷನಲ್ ಹೈವೇ ಪ್ರಾಧಿಕಾರ ಕ್ರಮವಹಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಳಗ ಅಗ್ರಹಿಸುತ್ತದೆ ಎಂದು ಹೇಳಿದ್ದಾರೆ.
