ವಿ. ಸೋಮಣ್ಣ ರವರು
ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವರು ಸಂಸದರು ತುಮಕೂರು ಜಿಲ್ಲೆ, ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಧಮ್ಮ ಜನಸ್ಪಂದನಾ ಸಂಸ್ಥೆ, ಅಧ್ಯಕ್ಷರಾದ ಹೇಮಂತ್ ಕುಮಾರ್ ಅವರು ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಆಲೂರು ತಾಲೂಕಿನ ರೈಲು ನಿಲುಗಡೆ ಆದೇಶ ರದ್ದಾಗಿರುವ ಬಗ್ಗೆ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಾಗ ಸಚಿವರು ಟಿಕೆಟ್ ಹಣವು ಸರಿಯಾದ ಪ್ರಮಾಣದಲ್ಲಿ ಸಂಗ್ರವಾಗುತ್ತಿಲ್ಲ ಆಲೂರು ನಿಲ್ದಾಣದಲ್ಲಿ ಪ್ರಯಾಣಿಕರು ಸರಿಯಾದ ಸದ್ಬಳಕೆ ಮಾಡಿಕೊಳ್ಳಬೇಕಾಯಿತು ಎಂದು ತಿಳಿಸಿದಾಗ ನಾವು ಸಚಿವರಿಗೆ ಅಂಕಿ ಅಂಶಗಳ ಪ್ರಕಾರ ಮಾಹಿತಿಯನ್ನು ವಿವರಿಸಿದ್ದೇವೆ.
ಜನಪ್ರನಿಧಿಗಳ ಸಂಪೂರ್ಣ ಮಾಹಿತಿ ಕೊರತೆ ಆಲೂರು ತಾಲೂಕಿಗೆ ರೈಲು ನಿಲುಗಡೆ ಆದೇಶ ಹಿನ್ನಡೆಯಾಗಿದೆ) ದೇಶದಲ್ಲಿ ಕೆಲವು ರಾಜ್ಯಗಳ ಆದಾಯದ ಸಂಗ್ರಹ ಕಡಿಮೆ ಇದ್ದರೂ ಕೂಡ ಶಾಶ್ವತ್ ನಿಲುಗಡೆಯ ಆದೇಶವನ್ನ ಹಿಂದಿನ ರೈಲ್ವೆ ಮಂತ್ರಿಗಳು ಮಾಡಿಕೊಟ್ಟಿದ್ದಾರೆ ಆದ್ದರಿಂದ.
ತಾವುಗಳು ಆಲೂರು ತಾಲೂಕಿನ ಹಿರಿಯ ನಾಗರಿಕರ ಪ್ರಯಾಣ ದೃಷ್ಟಿಯಿಂದ ಮತ್ತೊಮ್ಮೆ ಪುನರ್ ಪರಿಶೀಲಿಸಿ ಮತ್ತು ಮಾನವೀಯತೆಯಿಂದ ನಮ್ಮ ಹಿಂದೆ ಉಳಿದಿರುವ ಆಲೂರು ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ ನಿಲ್ಗಡೆ ಆದೇಶ ಹೊರಡಿಸಿ ಎಂದು ಮನವಿ ಮಾಡಿದ್ದೇವೆ.
ಸಚಿವರು ತಕ್ಷಣವೇ ಸ್ಪಂದಿಸಿ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ ಆದರೆ ಈಗ ಸುಬ್ರಮಣ್ಯದಲ್ಲಿ ವಿದ್ಯುತ್ ಕಾಮಗಾರಿಕರಣ ಕೆಲಸ ನಡೆಯುತ್ತಿರುವುದರಿಂದ ಯಾವುದೇ ರೈಲುಗಳು ಬೆಳಗಿನ ಸಮಯದಲ್ಲಿ ಸಂಚಾರವಾಗುತ್ತಿಲ್ಲ.
ಈ ವರ್ಷ ನವೆಂಬರ್ ತಿಂಗಳ ಕೊನೆಯವರೆಗೂ ಕಾಯಲೇಬೇಕು. ನಾವು ಈಗಾಗಲೇ ಕೆಲವು ರಾಜ್ಯಗಳ ಅಂಕಿ ಅಂಶವನ್ನ ಸಮರ್ಪಕವಾಗಿ ವಿವರಿಸಿದ್ದರಿಂದ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಈ ವರ್ಷದ ಅಂತ್ಯದೊಳಗೆ ಆಲೂರು ತಾಲೂಕಿಗೆ ರೈಲ್ವೆ ನಿಲುಗಡೆ ಬರುವ ಸಾಧ್ಯತೆ ಇದೆ ಎಂದು ಮಲೆನಾಡು ಶೋ ಗೆ ಹೇಮಂತ್ ಕುಮಾರ್ ರಾಧಮ್ಮ ಜನಸ್ಪಂದನ ಅವರು ಪ್ರಕಟಣೆ ಹೊಡಿಸಿದ್ದಾರೆ…
