ವಿಧಾನಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಅವರಿಂದ ಹಲವು ಕಾಮಗಾರಿಗಳಿಗೆ ಗುದ್ದಲಿ ಪೂಜೆ.
ಸಕಲೇಶಪುರ ವಿಧಾನಪರಿಷತ್ ಸದಸ್ಯರಾದ ಡಾ. ಸೂರಜ್ ರೇವಣ್ಣ ಅವರು ಇಂದು ದಿನಾಂಕ 17 ಜುಲೈ ಗುರುವಾರ ಹೆತ್ತೂರು ಹಾಗೂ ಯಸಳೂರು ಹೋಬಳಿಯ ಹಲವು ಗ್ರಾಮಗಳಾದ ಚಿಕ್ಕಂದೂರು. ಉಚ್ಚಂಗಿ. ಬ್ಯಾಗಡಹಳ್ಳಿ. ಹೊಂಗಡ ಹಳ್ಳ. ಹಿರಿದನಹಳ್ಳಿ. ಮರಜನಹಳ್ಳಿ. ಕರಡಿಗಾಲ ಗ್ರಾಮಗಳಲ್ಲಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗಳಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್. ಕೆ. ಕುಮಾರಸ್ವಾಮಿ ರವರು, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಉಜ್ಮಾ ಸುದರ್ಶನ್ ರವರು, ಜೆಡಿಎಸ್ ಮುಖಂಡರಾದ ಸಚಿನ್ ಪ್ರಸಾದ್ , ಟಿಎಪಿಎಂಸಿ ನಿರ್ದೇಶಕರು ಮತ್ತು ಉಚ್ಚಂಗಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕರಗೂರು ರಮೇಶ್ ರವರು , ಗೊದ್ದು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೌಶಿಕ್ , ಹೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನಾಗಭೂಷಣ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು,ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಬೆಕ್ಕನಹಳ್ಳಿ ನಾಗರಾಜು, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಜೇಗೌಡರು, ಅಧ್ಯಕ್ಷರು ಸದಸ್ಯರುಗಳು ಪಕ್ಷದ ಮುಖಂಡರುಗಳು ಕಾರ್ಯಕರ್ತರು ಗ್ರಾಮಸ್ಥರು ಭಾಗವಹಿಸಿದ್ದರು