ಇಂದು ಚಾಮುಂಡೇಶ್ವರಿ ಜನ್ಮ ದಿನೋತ್ಸವ ಸಕಲೇಶಪುರದಲ್ಲಿ ಭಕ್ತಾಧಿಗಳ ಜಂಗುಳಿ.
ಸಕಲೇಶಪುರ ಎಸ್ ಪಿ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಟ್ರಸ್ಟ್ ಇವರ ವತಿಯಿಂದ ಬೆಳಿಗ್ಗೆ 8-00 ಗಂಟೆಯಿಂದ ಶ್ರೀ ಚಾಮುಂಡೇಶ್ವರಿ ಜನ್ಮದಿನೋತ್ಸವದ ಪ್ರಯುಕ್ತ ಶ್ರೀ ಗಣಪತಿ, ಶ್ರೀ ಚಾಮುಂಡೇಶ್ವರಿ, ಶ್ರೀ ವೀರಭದ್ರ ಸ್ವಾಮಿ ದೇವರುಗಳಿಗೆ “ಪಂಚಾಮೃತ ಅಭಿಷೇಕ”, 12-30ಕ್ಕೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.
ಸಂಜೆ 6-00 ಗಂಟೆಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಲಲಿತ ಸಹಸ್ರನಾಮ ಅರ್ಚನೆ, ಸಂಜೆ 7-00 ಗಂಟೆಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಮಾಡಲಾಯಿತು.
