ಆಲೂರು ತಾಲೂಕಿನ ಮಡಬಲು ಗ್ರಾಮದ ವಾಸಿ ರಂಗಸ್ವಾಮಿ ಹಾಗೂ ಕಾವ್ಯ ದಂಪತಿಗಳ ಮಗ ದಿವಾಕರ್ ಗೌಡ ಎಂಬ 1 ನೇ ತರಗತಿ ವಿದ್ಯಾರ್ಥಿಗೆ ಶಾಲೆಯಲ್ಲಿ ಬೆನ್ನು ಕೆಂಪಾಗಿ ಬಾಸುಂಡೆ ಬರುವಂತೆ ಹೊಡೆದ ಘಟನೆ ವರದಿ ಆಗಿದೆ.
ಸಕಲೇಶಪುರ ತಾಲೂಕು, ಬಾಳುಪೇಟೆ ಗ್ರಾಮದಲ್ಲಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಈತ ವಿದ್ಯಾಭ್ಯಾಸ ಮಾಡುತ್ತಿದ್ದು ಇಂದು ಶಾಲೆಯಲ್ಲಿ ಶಿಕ್ಷಕರು ಸಿಕ್ಕಾಪಟ್ಟೆ ಹೊಡೆದಿರುವ ವಿಷಯ ಬೆಳಕಿಗೆ ಬಂದಿರುತ್ತದೆ.
ಈ ಬಗ್ಗೆ ಶಾಲೆಯ ಮುಖ್ಯಸ್ಥರು ಹಾಗೂ ಶಿಕ್ಷಕಿಯ ಮೇಲೆ ಪೋಲಿಸ್ ಇಲಾಖೆ ಕೂಡಲೇ ಕ್ರಮ ವಹಿಸಬೇಕು. ಮತ್ತು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಈ ಮಗುವಿನ ಮೇಲಾದ ಹಲ್ಲೆ ಬಗ್ಗೆ ತನಿಖೆ ಮಾಡುವಂತೆ ಅಗ್ರಹಿಸಲಾಗಿದೆ

