ಎಚ್ಪಿವಿ ವ್ಯಾಕ್ಸಿನೇಷನ್ ಲಸಿಕೆಯನ್ನು ರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಆಲೂರು ತಾಲೂಕು ವಿದ್ಯಾರ್ಥಿನಿಯರಿಗೆ ಯಶಸ್ವಿಯಾಗಿ ಪ್ರಥಮ ಹಂತವಾಗಿ 50 ವಿದ್ಯಾರ್ಥಿನಿಯರಿಗೆ ಹಾಕಲಾಯಿತು.
ಈ ಕಾರ್ಯಕ್ರಮವು ಇನ್ಸ್ಪೈರ್ ಇಂಟರ್ನ್ಯಾಷನಲ್ ಶಾಲೆ ಕಾರುಗೋಡು ನಡೆಯಿತು… ಈ ಕಾರ್ಯಕ್ರಮದಲ್ಲಿ ಕಳೆದ ತಿಂಗಳು ಮೆಮೋಗ್ರಫಿ ಸ್ಕ್ಯಾನಿಗೆ ಒಳಗಾಗಿದ್ದ ಮಹಿಳೆಯರಿಗೆ ಸ್ಕ್ಯಾನಿಂಗ್ ರಿಪೋರ್ಟನ್ನು ಸಹ 31 ಮಹಿಳೆಯರಿಗೆ ನೀಡಲಾಯಿತು.
ಈ ಕಾರ್ಯಕ್ರಮದ ಆಯೋಜಕರಾದ ರಾಧಮ್ಮ ಜನಸ್ಪಂದನ ಹೇಮಂತ್ ಕುಮಾರ್ ರವರು ಮಾತನಾಡಿ ಇಂತಹ ಕಾರ್ಯಕ್ರಮ ಮಾಡಲು ನನಗೆ ಮೊದಲು ಸುಧಾ ಮೂರ್ತಿ ಅವರ ಮಾತುಗಳು, ರಾಜ್ಯಸಭೆಯಲ್ಲಿ ಕೇಳಿಸಿಕೊಂಡು ಮಹಿಳೆಯರ ಭವಿಷ್ಯದ ಆರೋಗ್ಯಕ್ಕಾಗಿ ಸಮಾಜಕ್ಕೆ ಕೊಡಬೇಕೆಂಬ ದೃಷ್ಟಿಯಿಂದ ನನ್ನ ವೈಯಕ್ತಿಕ ದುಡಿಮೆಯಲ್ಲಿ ಒಂದು ಸಾವಿರ ಮಕ್ಕಳಿಗೆ ಆಲೂರು ತಾಲೂಕಿನ ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಿದ್ದೇನೆ ಎಂದರು..
ಇಂತಹ ಕಾರ್ಯಕ್ರಮಕ್ಕೆ ಎಟಿ ರಾಮಸ್ವಾಮಿ ಅವರ ಆದರ್ಶವೇ ಪ್ರಮುಖ ಕಾರಣ ಅವರು ಅರಕಲಗೂಡು ನಲ್ಲಿ 2,000 ಮಕ್ಕಳಿಗೆ ಈಗಾಗಲೇ ಹಾಕಿಸಿದ್ದಾರೆ ಇಂತಹ ಕಾರ್ಯಕ್ರಮಕ್ಕೆ ಉಚಿತವಾಗಿ ವೈದ್ಯರು ಬಂದು ಸಹಕರಿಸುತ್ತಿರುವುದು ಅವರ ಸಾಮಾಜಿಕ ಕಳಕಳಿಗೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಈ ಕಾರ್ಯಕ್ರಮದಲ್ಲಿ ಇಂದು ಎ ಟಿ ರಾಮಸ್ವಾಮಿ ಅವರ ಮಗ ಪ್ರದೀಪ್ ರಾಮಸ್ವಾಮಿಯವರ ಸಹ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಪ್ರದೀಪ ರಾಮಸ್ವಾಮಿಯವರು ಮಾತನಾಡಿ ನಮ್ಮ ತಂದೆ ಹೋಗುತ್ತಿರುವ ದಾರಿಯಲ್ಲಿ ಹೇಮಂತ್ ಕುಮಾರ್ ಹೋಗುತ್ತಿರುವುದು ಆಲೂರು ತಾಲೂಕಿನ ಸಾಮಾಜಿಕ ಕಳಕಳಿಗೆ ಅವರಿಗೆ ಅಭಿನಂದಿಸುತ್ತೇನೆ ನಮ್ಮ ತಂದೆ ಮಾಡಿರುವ ಅರಕಲಗೂಡು ತಾಲೂಕಿನಲ್ಲಿ ಮಕ್ಕಳಿಗೆ ಕೆಲಸವನ್ನ ಸ್ಮರಿಸಿ ಹೇಮಂತ್ ಕುಮಾರ್ ಅವರು ಇಟ್ಟಿರುವ ಹೆಜ್ಜೆ ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನುಡಿದರು.
ಡಾ. ಸಾವಿತ್ರಿ ಮಲೆನಾಡು ನರ್ಸಿಂಗ್ ಹೋಮ್
ಮಾತನಾಡಿ ಹೇಮಂತ್ ಕುಮಾರ್ ಅವರು ಇಂತಹ ಕಾರ್ಯ ಮಾಡಲು ಅವರ ತಾಯಿ ಆಶೀರ್ವಾದವೇ ಪ್ರಮುಖ ಕಾರಣ ಅವರ ತಾಯಿ ನೆನಪಿಗಾಗಿ ದುಡಿಯುತ್ತಿರುವುದು ಆರೋಗ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿಯಾಗಬೇಕೆಂದರು.
5ಈ ಕಾರ್ಯಕ್ರಮದಲ್ಲಿ ಡಾ. ಭಾರತಿ ರಾಜಶೇಖರ್ ಡಾ. ಪ್ರತೀಕ್ಷ ಇನ್ನು ಅನೇಕ ವೈದ್ಯರು ಹಾಜರಿದ್ದರು ಇನ್ಸ್ಪೈರ್ ಶಾಲೆಯ ಮುಖ್ಯಸ್ಥ ಅಶೋಕ್, ಪೂವಯ್ಯ, ಸದಾನಂದ ಗೌಡ ಮುಂತಾದವರು ಸಹಕರಿಸಿದರು

