
ವರದಿ ರಾಣಿ ಪ್ರಸನ್ನ
ಪ್ರಾಣಕಂಠಕವಾದ ಗುಲಗಳಲೆ ಚಿಕ್ಕಿ ಫ್ಯಾಕ್ಟರಿ ರಸ್ತೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ.
ಕಳಪೆ ಕಾಮಗಾರಿಯಿಂದ ಎಷ್ಟೋ ಸಾವುಗಳನ್ನ ಕಂಡ ರಸ್ತೆ ಆದರೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಹೆದ್ದಾರಿ ರಸ್ತೆ ಅಧಿಕಾರಿಗಳು.
ರಸ್ತೆ ಮಾಡುವಾಗಲೇ ಕಳಪೆ ಕಾಮಗಾರಿ ಎಂದು ಯಡೆಹಳ್ಳಿ ಮಂಜುನಾಥ್ ಅವರಿಂದ ರಸ್ತೆ ಬದಿ ಪ್ರತಿಭಟನೆ ಮಾಡಿದರು ಕ್ಯಾರೆ ಅನ್ನದ ಅಧಿಕಾರಿಗಳು
ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಖಾಲಿ ಬ್ಯಾರೆಲ್ ತುಂಬಿದ್ದ ಲಾರಿ ಗುಲಗಳಲೆಯ ಚಿಕ್ಕಿ ಫ್ಯಾಕ್ಟರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ತಕ್ಷಣ ಗುಲಗಳಲೆಯ ಗ್ರಾಮಸ್ಥರು ಮತ್ತು ಸಲೀಮ್, ಮಲೆನಾಡು ರಕ್ಷಣಾ ಸೇನೆಯ ಹಾಸನ ಜಿಲ್ಲಾ ಉಪಾಧ್ಯಕ್ಷರಾದ ನಾಗೇಂದ್ರ ಹೊಸಕೊಪ್ಪಲು ಇವರಿಂದ ಲಾರಿ ಚಾಲಕನಿಗೆ ಸಹಾಯ ಮಾಡಲಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇಂದು ಯಾವುದೇ ಸಾವು ನೋವುಗಳು ಸಂಭಾವಿಸಿಲ್ಲವಾದರೂ ಇನ್ನಾದರೂ ಅಧಿಕಾರಿಗಳು ಎಚ್ಚತ್ತು ಕೊಳ್ಳಿ ಎಂದು ಗ್ರಾಮಸ್ಥರು ಹರಿಹಯ್ದಿದ್ದಾರೆ.



