ನಾಗೇಶ್ ಎಂಎಚ್ ಮಾಗೇರಿ.
ಶಾಸಕರೇ ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಪುಟ್ಟ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಮೂಲಭೂತ ಸೌಕರ್ಯಗಳನ್ನು ಮತ್ತು ಅಗತ್ಯತೆಗಳನ್ನು ಒದಗಿಸಿ
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಯಸಳೂರು ಹೋಬಳಿಯ ಯಸಳೂರಿನಲ್ಲಿರುವ
ಡಾ||ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭವಾಗಿ 9 ವರ್ಷಗಳು ಕಳೆದಿದೆ.ಆದರೆ ಇಲ್ಲಿಯವರೆಗೆ ಯಾವುದೇ ರೀತಿಯಾದ ಸರಿಯಾದ ಮೂಲಭೂತ ಸೌಕರ್ಯಗಳನ್ನು ಮಕ್ಕಳಿಗೆ ಒದಗಿಸುವಲ್ಲಿ ವಿಫಲವಾಗಿದ್ದಾರೆ.
ಸರಿಯಾದ ಡೆಸ್ಕ್ ಇಲ್ಲದೆ ಮಕ್ಕಳು ಪರದಾಡುವ ಪರಿಸ್ಥಿತಿ

ಮಕ್ಕಳು ಉಪಯೋಗಿಸುತ್ತಿರುವ ಹಳೆಯದಾದ ಮತ್ತು ಮಕ್ಕಳು ಕುಳಿತು ಕೊಂಡರೆ ಡೆಸ್ಕ್ ಮುರಿಯುವ ಹಂತದಲ್ಲಿರುವ ಡೆಸ್ಕ್ ಹಾಕಿ ಬೋಧನೆ ಮಾಡಲಾಗುತ್ತಿದೆ.
ಒಂದು ವೇಳೆ ಮಕ್ಕಳು ಕುಳಿತುಕೊಂಡಾಗ ಡೆಸ್ಕ್ ಮುರಿದುಕೊಂಡರೆ ಮಕ್ಕಳಿಗೆ ಅನಾಹುತ ಆಗಿದ್ದಲ್ಲಿ ಇದಕ್ಕೆ ನೇರ ಹೊಣೆ ಯಾರು?
ನಮ್ಮ ಮಕ್ಕಳು ಒಂದು ಪ್ರಖ್ಯಾತ ಡಾ||ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆಂದು ಪೋಷಕರು ಹೆಮ್ಮೆ ಪಡುವಾಗ
ಉನ್ನತವಾದ ಶಿಕ್ಷಣ,
ಊಟದ ವಸತಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಇಲ್ಲಿದೆ ಎಂದು ನಂಬಿ ಚಿಕ್ಕ ಮಕ್ಕಳನ್ನು ಈ ಶಾಲೆಯಲ್ಲಿ ಸೇರಿಸಲು ಪೋಷಕರು ಮುಂದೆ ಬಂದಿರುತ್ತಾರೆ.
ಆದರೆ ಇಲ್ಲಿ ಸರಿಯಾದ ಸೌಕರ್ಯಗಳು ಇಲ್ಲ ಎಂದು ಗೊತ್ತಾದರೆ ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಇಲ್ಲಿ ಬಿಡಲು ಮುಂದೆ ಬರುವುದು ಸಹ ಅನುಮಾನವಾಗುತ್ತದೆಯೆಂದು
ಪೋಷಕರ ಅಭಿಪ್ರಾಯವಾಗಿದೆ.
ಮಲಗಲು ಸರಿಯಾದ ವ್ಯವಸ್ಥೆ ಇಲ್ಲ.
ಈಗಿನ ಕೊರೆಯುವ ಚಳಿಯಲ್ಲಿ ಮಕ್ಕಳು ಕಾಟ್(ಮಂಚ) ವ್ಯವಸ್ಥೆ ಇಲ್ಲದೆ ನೆಲದಲ್ಲೇ ಮಲಗುವ ಪರಿಸ್ಥಿತಿ ಎದುರಾಗಿದೆ.
ಇತ್ತೀಚಿನ ದಿನಗಳಲ್ಲಿ ಕೇವಲ ಬೆಡ್ ಗಳನ್ನು ಮಾತ್ರ ಒದಗಿಸಿದ್ದಾರೆ ಎಂದು ಅಲ್ಲಿಯ ಸಿಬ್ಬಂದಿ ತಿಳಿಸಿರುತ್ತಾರೆ.
ಶಿಕ್ಷಣ ಹಾಗು ಕ್ರೀಡೆಯಲ್ಲಿ ಉತ್ತಮ ಹೆಸರು ಮಾಡಿರುವ ಈ ವಸತಿ ಶಾಲೆಯ ಮಕ್ಕಳು ರಾಜ್ಯ ಮಟ್ಟದವರೆಗೂ ಪ್ರತಿನಿಧಿಸುತ್ತಾರೆ.ಆದರೆ ಈ ಮಕ್ಕಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ.
ಡಾ|| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯು ಪ್ರಾರಂಭವಾಗಿ
9 ವರ್ಷ ಕಳೆದರೂ ಸಹ ಮಕ್ಕಳಿಗೆ ಮೂಲಭೂತ ವ್ಯವಸ್ಥೆಯನ್ನು ಒದಗಿಸುವಲ್ಲಿ ಏಕೆ ವಿಫಲವಾಗಿದೆ!!?
ಒಂದು ವೇಳೆ ಪೋಷಕರು ಮಕ್ಕಳ ಮೂಲಭೂತ ಸೌಕರ್ಯಗಳ ಬಗ್ಗೆ ಗಮನಹರಿಸಲು ಮುಂದಾದರೆ ಯಾವುದೇ ಕಾರಣಕ್ಕೂ ವಿಸಿಟಿಂಗ್ ರೂಮಿನಿಂದ ಬೇರೆ ಕಡೆ ಹೋಗಲು ಪೋಷಕರಿಗೆ ಅವಕಾಶ ಇಲ್ಲವೆಂದು ಹೇಳಲಾಗುತ್ತದೆ, ನಮ್ಮ ಮಕ್ಕಳಿಗೆ ಏನಾದರೂ ತೊಂದರೆ* ಆಗಿದ್ದಲ್ಲಿ*
ಅಧಿಕಾರಿಗಳು* ಮತ್ತು* ಜನಪ್ರತಿನಿಧಿಗಳೇ ಉತ್ತರಿಸಬೇಕಿದೆ
ಎಂದು ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ*.
ಕೊಡ್ಲಿಪೇಟೆ ಮತ್ತು ಚಂಗಡಹಳ್ಳಿ
ಕಲ್ಪಿಸುವ*ಮುಖ್ಯ ರಸ್ತೆಯಿಂದ ಈ ಡಾ||ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಕೇವಲ 300 ಮೀಟರ್ ರಸ್ತೆ ಅವಶ್ಯಕವಿದ್ದು* ದುರಸ್ತಿ ಮಾಡಲು ವಿಫಲವಾಗಿದ್ದಾರೆ*.
*ಈ ರಸ್ತೆ ದುರಸ್ತಿ ಮಾಡಲು 9 ವರ್ಷಗಳಿಂದ ಮೀನಾಮೇಷ
*ಎಣಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ!!? *ದಯವಿಟ್ಟು ಇದಕ್ಕೆ *ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೇವಲ 300 ಮೀಟರ್ ಇರುವ ರಸ್ತೆಯನ್ನು ದುರಸ್ತಿ ಕಾರ್ಯ ಮಾಡಿ ವಿದ್ಯಾಭ್ಯಾಸ ಮಾಡುತ್ತಿರುವ ನಮ್ಮ ಪುಟ್ಟ *ಮಕ್ಕಳ ಮೂಲಭೂತ ಸಾಕರೆಗಳು ಮತ್ತು ಅಗತ್ಯತೆಗಳ ಬಗ್ಗೆ ಗಮನಹರಿಸಿ
*ಎಲ್ಲಾ ಅಧಿಕಾರಿಗಳಿಗೆ ಶಾಸಕರಿಗೆ ಮನವಿ ಕೊಟ್ಟಿದ್ದೇವೆ, ಅತೀ ಶೀಘ್ರದಲ್ಲಿ ಜನವರಿ 15ನೇ ತಾರೀಖಿನ ಒಳಗಾಗಿ ನಮ್ಮ ವಸತಿ ಶಾಲೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳಿಗೆ ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತದೆ ಈಗ ಟೆಂಡರ್ ಆಗಿದೆ.*

*ಪ್ರಾಂಶುಪಾಲರು
*ಡಾ||ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಯಸಳೂರು*.
ವಸತಿ ಶಾಲೆ ತೆರೆಗೊಂಡು ಒಂಭತ್ತು ವರ್ಷಗಳಾದರೂ ಶಾಲೆಗೆ ಸುಸಜ್ಜಿತ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಇರುವುದು ಬಹಳ ಬೇಸರದ ಸಂಗತಿ. ಆಳುವ ಸರ್ಕಾರಗಳು ಬೀದಿನಾಯಿಗಳ ಮೇಲೆ ತೋರಿಸುವ ಕಾಳಜಿಯನ್ನು ಸ್ವಲ್ಪವಾದರೂ ಇಂತಹ ಶಾಲೆ ಮತ್ತು ವಿದ್ಯಾರ್ಥಿಗಳ ಮೇಲೆ ತೋರಿಸದೆ ಇರುವುದು ದುರಂತ. ಬಜೆಟ್ ನಲ್ಲಿ ಇಲಾಖೆವಾರು ಇಂತಹ ಇಲಾಖೆಗಿಷ್ಟು ಹಣ ಮೀಸಲು ಎಂದು ತೆಗೆದಿಡುವಾಗ,ಆ ಹಣ ಎಲ್ಲಿ ಪೋಲಾಗುತ್ತಿದೆಂಬುದೇ ಪ್ರಶ್ನೆಯಾಗಿದೆ. ಇನ್ನಾದರೂ ಸರ್ಕಾರಗಳು ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಒತ್ತಾಯಿಸುತ್ತೇನೆ.

ಯೋಗೇಶ್ ಡಿ.ಆರ್ ಭಾರತೀಯ-ದೊಡ್ಡಕಲ್ಲೂರು
ಸಾಮಾಜಿಕ ಹೋರಾಟಗಾರರು ಹಾಗೂ ಬಿ.ವಿ.ಎಸ್ ಮುಖಂಡರು- ಸಕಲೇಶಪುರ
ಜನಪ್ರತಿನಿಧಿಗಳ ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದರೂ ಸಹ ಇಲ್ಲಿಯವರೆಗೆ ಯಾವುದೇ ರೀತಿಯ ಸರಿಯಾದ ಮೂಲಭೂತ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ವಿಫಲವಾಗಿದ್ದಾರೆ.
