ಆಲೂರು. ತಾಲೂಕಿನ ಕದಾಳು ಗ್ರಾಮ ಪಂಚಾಯಿತ ಅಧ್ಯಕ್ಷರಾಗಿ ಬೆಟ್ಟದಲ್ಲಿ ಪುಟ್ಟರಾಜು ಆಯ್ಕೆ.
ಆಲೂರು ತಾಲೂಕಿನ ಕದಾಳು ಗ್ರಾಮ ಪಂಚಾಯತಿಯಲ್ಲಿ ಎಲ್ಲಾ ಸದಸ್ಯರ ಒಪ್ಪಂದದಂತೆ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಬೆಡ್ದಳ್ಳಿ ಗ್ರಾಮದ ಪುಟ್ಟರಾಜ ಅವರು ಅವಿರೋಧವಾಗಿ ಆಯ್ಕೆಯಾದರು.
ನಂತರ ಮಾತನಾಡಿದ ನೂತನ ಅಧ್ಯಕ್ಷ ಪುಟ್ಟರಾಜ ಕದಾಳು ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಹಾಗೂ ಚರಂಡಿ. ರಸ್ತೆ. ಕುಡಿಯುವ ನೀರನ್ನು ಸಮರ್ಪಕವಾಗಿ ನನ್ನ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತೇನೆ ಎಂದು ಮಾತನಾಡಿದರು.
ನಂತರ ಮಾತನಾಡಿದ ಹಾಸನ ಜಿಲ್ಲಾ ಡಿ.ಸಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರುಗಳಾದ ಕಬ್ಬಿನಹಳ್ಳಿ ಜಗದೀಶ್ ಹಾಗೂ ಮಂಜೇಗೌಡ ಕಣದಲ್ಲಿಆಗಮಿಸಿ ನೂತನವಾಗಿ ಆಯ್ಕೆಯಾದ ಪುಟ್ಟರಾಜು ಅವರನ್ನು ಅಭಿನಂದಿಸಿ ಗೌರವಿಸಿದರು. ನಂತರ ಮಾತನಾಡಿದ ಕಬ್ಬಿನಹಳ್ಳಿ ಜಗದೀಶ್ ಪುಟ್ಟರಾಜು ಅವರು ಅಧ್ಯಕ್ಷರಾಗಿರುವುದು ನಮಗೆ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಜನರ ಮನ್ನಣೆ ಪಡೆಯಬೇಕೆಂದು ಮಾತನಾಡಿದರು.
ಮಾಜಿ ಅಧ್ಯಕ್ಷರಾದ ಹಾಗೂ ಹಿರಿಯ ಮುಖಂಡರಾದ ರಾಜಪ್ಪ ಮಾತನಾಡಿ ನಾವು ಪಂಚಾಯಿತಿಯಲ್ಲಿದ್ದಾಗ ಪಂಚಾಯಿತಿಯ ಸರ್ವತೋಮುಖ ಬೆಳವಣಿಗೆ ಮಾಡಿದ್ದೇವೆ ಇದನ್ನೆಲ್ಲ ಅರಿತು ಇಂದಿನ ಅಧ್ಯಕ್ಷರಾದ ಪುಟ್ಟರಾಜು ಅವರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಮಾತನಾಡಿದಲ್ಲದೆ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಾಂತರಾಜು. ಶಾಂತಪ್ಪ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಗ್ರಾಮ್ ಪಂಚಾಯ್ತಿ ಎಲ್ಲ ಸದಸ್ಯರುಗಳು. ಮುಖಂಡರುಗಳಾದ ನವೀನ್ ಪ್ರವೀಣ್. ಸೋಮಶೇಖರ್. ನಂದೀಶ್. ಪಟೇಲ. ಪರಮೇಶ್. ಕದಾಳ್ ಗ್ರಾಮ ದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ನೂರಾರು ಸಂಖ್ಯೆಯಲ್ಲಿ ಇದ್ದರು.
