.ಮಕ್ಕಳಲ್ಲಿ ಅಡಗಿರುವ ಪ್ರತಿಭೆಹೊರ ತರಲು ಪ್ರತಿಭಾ ಕಾರಂಜಿ ವೇದಿಕೆ ಸಹಕಾರಿ ಎಂದು ಶಾಸಕ ಸಿಮೆಂಟ್ ಮಂಜು.ಹೇಳಿದರು.
ಆಲೂರು ತಾಲೂಕಿನ ಕಸಬಾ ಹೋಬಳಿ ಬೈರಾಪುರದ ಎಸ್. ವಿ. ಪಬ್ಲಿಕ್ ಶಾಲೆಯ ಆವರಣದಲ್ಲಿ ತಾಲೂಕು ಮಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗಳ ಪ್ರತಿಭಾ ಕಾರಂಜಿಯನ್ನು ಅದ್ದೂರಿಯಾಗಿ ನಡೆಸಲಾಯಿತು ಶಾಸಕರಾದ ಸಿಮೆಂಟ್ ಉದ್ವಾಟಿಸಿ ಮಾತನಾಡಿದರು.
ಪಠ್ಯತರ ಚಟುವಟಿಕೆಯಲ್ಲಿ ಮಕ್ಕಳು ಹೆಚ್ಚು ಭಾಗವಹಿಸಬೇಕು ಸರ್ಕಾರಿ ಹಿರಿಯ ಕಿರಿಯ ಪ್ರಾಥಮಿಕ ಪಾಠಶಾಲೆಯ ಮಕ್ಕಳುಗಳು ಹೆಚ್ಚು ಭಾಗವಹಿಸಿ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಗುಣಗಳನ್ನು ಕಲಿಯಬೇಕು. ತಂದೆ ತಾಯಿಗೆ ಗೌರವವನ್ನು ತರಬೇಕು ಇಂದಿನ ವಿದ್ಯಾರ್ಥಿಗಳೆ ಮುಂದಿನ ಪ್ರಜೆಗಳು ವಿದ್ಯಾರ್ಥಿಗಳು ರಾಷ್ಟ್ರದ ಅಮೂಲ್ಯವಾದ ಆಸ್ತಿ ಆಗಬೇಕು. ಹಾಗೂ ಪೋಷಕರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಮೊಬೈಲ್ ಹಾವಳಿಯನ್ನು ತಪ್ಪಿಸಿ ದಿನಪತ್ರಿಕೆಗಳ ಸಾಕಾರ ಪಡೆದು ಉತ್ತಮ ವಿದ್ಯಾವಂತರಾಗಬೇಕೆಂದು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಅದಲ್ಲದೆ ಎಸ್ ವಿ ಪಬ್ಲಿಕ್ ಶಾಲೆ ಉತ್ತಮ ವಾತಾವರಣವನ್ನು ಹೊಂದಿ ವಿದ್ಯಾರ್ಥಿಗಳಿಗೆ ಭದ್ರ ಬುನಾದಿಯಾಗುತ್ತಿದೆ ಉತ್ತಮವಾದ ವಿದ್ಯಾ ಸಂಸ್ಥೆ ಎಂದು ಮಾತನಾಡಿದರು.
ನಂತರ ಮಾತನಾಡಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳದ ಕೃಷ್ಣೇಗೌಡ ಹಿಂದಿನ ವಿದ್ಯಾರ್ಥಿಗಳು ಭವಿಷ್ಯದ ಆಶಾ ಜ್ಯೋತಿಗಳು ಅವರ ಬುದ್ಧಿ ಚುರುಕುಗೊಳಿಸಿ ಸದೃಢವಾಗಿಸುವ ಗುಣಮಟ್ಟದ ಶಿಕ್ಷಣದ ಜೊತೆಗೆ ಅವರಿಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಭಾಗವಹಿಸಲು ಈ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸಹಕಾರಿ ಇದನ್ನು ಇಂದಿನ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕೆಂದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಮಟ್ಟಕ್ಕೆ ಎಲ್ಲಾ ಹೋಬಳಿಯ ವಿದ್ಯಾರ್ಥಿಗಳು ಹಾಗೂ ಶಾಲಾ ತಂಡಗಳು ಭಾಗವಹಿಸಿದ್ದವು.
ನಂತರ ಆಲೂರು ತಾಲೂಕಿನ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜು ಅವರನ್ನು ಎಸ್ ವಿ ಪಬ್ಲಿಕ್ ಶಾಲೆಯ ಮುಖ್ಯಸ್ಥರಾದ ಗಿರೀಶ್ ಹಾಗೂ ನಳಿನಾರವರು ಶಾಲೆ ಎಲ್ಲ ಮುಖ್ಯಸ್ಥರು ಶಿಕ್ಷಕರು ಗೌರವಿಸಿ ಸನ್ಮಾನಿಸಿದರು. ನಂತರ ಶಾಸಕರು ತಾಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ತಿಮ್ಮೇಗೌಡ ಕಾಂತರಾಜು. ಉಪಾಧ್ಯಕ್ಷರಾದ ದೇವೇಂದ್ರ. ಮುಖ್ಯ ಶಿಕ್ಷಕರಾದ ಸುನಿಲ್. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಗಳಾದ ಕೃಷ್ಣೇಗೌಡ. ಸಮನ್ವಯ ಅಧಿಕಾರಿಗಳಾದ ವಿಜಯ್ ಕುಮಾರ್. ಪರಮೇಶ್. ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ರಂಗೇಗೌಡ. ಆನಂದ್. ಮುಖಂಡರುಗಳಾದ ಕೃಷ್ಣಪ್ಪ. ಗ್ರಾಮ ಪಂಚಾಯತಿ ಸದಸ್ಯರಾದ ನಂಜುಂಡಪ್ಪ. ಎಲ್ಲಾ ಶಾಲೆಯ ಶಿಕ್ಷಕರು. ಪ್ರಮುಖವಾಗಿ ಎಸ್ ವಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಮತ್ತು ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಪೋಷಕರು ಎಲ್ಲಾ ಎಸ್ಟಡಿ ಎಂಸಿ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.

