ವನಗೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಹೇಮಂತ್ ಕುಮಾರ್ HD(ಸುಧೀರ್ )
ಮಾಗೇರಿ (ಹಿಜ್ಜಿನಹಳ್ಳಿ)
ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವನಗೂರು ಗ್ರಾಮ ಪಂಚಾಯತಿ ಯಲ್ಲಿ ಇಂದು ಅಧ್ಯಕ್ಷರ ಚುನಾವಣೆ ನಡೆಯಿತು.
ಚುನಾವಣೆ ಕಣದಲ್ಲಿ ಬಿಜೆಪಿ ಬೆಂಬಲಿತ ಸತೀಶ್ ವನಗೂರು
ಜೆಡಿಎಸ್ ಬೆಂಬಲಿತ ಹೇಮಂತ್ ಕುಮಾರ್ ಕಣದಲ್ಲಿದ್ದರು.
ಗ್ರಾಮ ಪಂಚಾಯತಿ
9 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಎರಡು ಮತ
ಜೆಡಿಎಸ್ ಬೆಂಬಲಿತ ಅಭ್ಯರ್ಥಿಗೆ ಆರು ಮತ
ಇನ್ನೊಬ್ಬ ಸದಸ್ಯರು ಚುನಾವಣೆಗೆ
ಹಾಜರಾಗಿಲ್ಲ.
ಚುನಾವಣೆ ಅಧಿಕಾರಿಯಾಗಿ ತಾಲೂಕು ಪಂಚಾಯತಿ ಎ ಡಿ ಆದಿತ್ಯ ರವರು ನೆಡೆಸಿ ಕೊಟ್ಟರು.
ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತಾ ಆರು ಮತ ಪಡೆದು ಹೇಮಂತ್ ಕುಮಾರ್ ಎಚ್ ಡಿ (ಸುಧೀರ್) ರವರು ಹಿಜ್ಜಿನಹಳ್ಳಿ (ಮಾಗೇರಿ ದಾಕ್ಲೆ) ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪುಷ್ಪ ರವರು ಆಯ್ಕೆ ಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರು ಮತ್ತು ಶಾಸಕರು ಆದಾ ಎಚ್ ಕೆ ಕುಮಾರ ಸ್ವಾಮಿ ಮತ್ತು
ಅವರ ಪತ್ನಿ ಚಂಚಲ ಕುಮಾರ ಸ್ವಾಮಿ ಯವರು ಶುಭ ಹಾರೈಸಿದರು.
ಇದೆ ಸಂದರ್ಭದಲ್ಲಿ ಸಚಿನ್ ಪ್ರಸಾದ್ ಹೆತ್ತೂರು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಉಜ್ಮಿ ಸುದರ್ಶನ್ , ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಅನಿತಾ ಕುಮಾರ್,ಹಾಲಿ ಸದಸ್ಯರಾದ ಜಯಶ್ರೀ ಪವನ್, ವನಗೂರು ಮಾಜಿ ಉಪಾಧ್ಯಕ್ಷರಾದ ನಾರಾಯಣ ಪೂಜಾರಿ, ಎಲ್ಲಾ ಸದಸ್ಯರು ಮತ್ತು ಗೊದ್ದು ಕೃಷಿ ಪತ್ತಿನ ಅಧ್ಯಕ್ಷರಾದ ಗೊದ್ದು ಕೌಶಿಕ್ ಮತ್ತು ನಿರ್ದೇಶಕರಾದ ಕುಮಾರ್ ಪಿ ಡಿ ಕಳ್ಳಹಳ್ಳಿ ಮತ್ತು ಸುತ್ತ ಮುತ್ತಲಿನ ಎಲ್ಲಾ
ಜೆ ಡಿ ಎಸ್ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.
