ಉಚ್ಚಂಗಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಶಾಸಕರಾದ ಎಚ್. ಕೆ ಕುಮಾರಸ್ವಾಮಿ
ಸಕಲೇಶಪುರ : ತಾಲೂಕಿನ ಉಚ್ಚಂಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರ ಸ್ಥಾನಗಳು ಹಿಂದುಳಿದ ವರ್ಗ (ಎ) ಗೆ ಮೀಸಲಾಗಿದ್ದು, ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಉಚ್ಚಂಗಿ ಕ್ಷೇತ್ರದ ಸದಸ್ಯರಾದ ತಾರಾ ರವರು, ಉಪಾಧ್ಯಕ್ಷರಾಗಿ ದೊಡ್ಡ ಕುಂದೂರು ಕ್ಷೇತ್ರದ ಸದಸ್ಯರಾದ ಡಿ. ಡಿ ವಿನಯ್ ರವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರಾದ ಆದಿತ್ಯ ಹೆಚ್. ಎ ರವರು ಕಾರ್ಯ ನಿರ್ವಹಿಸಿದರು.
