ವಳಲಹಳ್ಳಿಯ ಓಂ ಶ್ರೀ ಗುರು ಶನೈಶ್ಚರ ಸ್ವಾಮಿ ಸನ್ನಿಧಿಯಲ್ಲಿ ದಿನಾಂಕ: 19.11.2025ನೇ ಬುಧವಾರ ಕಾರ್ತಿಕ ಪೂಜಾ ಮಹೋತ್ಸವ.
ಸಕಲೇಶಪುರ :- ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿಯ ಓಂ ಶ್ರೀ ಗುರು ಶನೈಶ್ಚರ ಸ್ವಾಮಿ ಸನ್ನಿಧಿಯಲ್ಲಿ ದಿನಾಂಕ: 19.11.2025ನೇ ಬುಧವಾರ ಅಮಾವಾಸ್ಯೆ ಪೂಜೆ ಮತ್ತು ಕಾರ್ತಿಕ ಪೂಜೆಯು ಇರುತ್ತದೆ.
ಬೆಳಿಗ್ಗೆ 8ಕ್ಕೆ ಶ್ರೀ ಸ್ವಾಮಿಗೆ ಮತ್ತು ಎಲ್ಲಾ ದೇವರಿಗೆ ಅಭಿಷೇಕ, ಪುಷ್ಪಲಂಕಾರ ಹಾಗೂ ತೀರ್ಥ ಪ್ರಸಾದ ವಿನಿಯೋಗ ನೆಡೆಯಲಿದೆ.ಮಧ್ಯಾಹ್ನ 1ಗಂಟೆಗೆ ಅನ್ನ ಸಂತರ್ಪಣೆ ಹಾಗೂ ರಾತ್ರಿ 8ಕ್ಕೆ ಊಟದ ವ್ಯವಸ್ಥೆ ಇರುತ್ತದೆ.ನಂತರ ಸಂಜೆ 9.30ಕ್ಕೆ ಶನಿಮಹಾತ್ಮ ಹರಿಕಥೆ ಹಾಗೂ ದೇವಸ್ಥಾನದಲ್ಲಿ ದೀಪೋತ್ಸವ ಜರುಗಲಿದೆ.
ಈ ಎಲ್ಲಾ ದೇವರ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಶನಿದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ವತಿಯಿಂದ ವಿನಂತಿ ಮಾಡಿಕೊಳ್ಳುತ್ತಿದ್ದಾರೆ.
