ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಖಂಡಿಸಿ ಜೆಡಿಎಸ್ ಸತ್ಯಯಾತ್ರೆ
ಆಲೂರು. ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಖಂಡಿಸಿ ಜೆಡಿಎಸ್ ವತಿಯಿಂದ ತಾಲೂಕಿನಿಂದ ಹೊರಟ ಧರ್ಮಸ್ಥಳ ಸತ್ಯಯಾತ್ರೆಗೆ ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ ಚಾಲನೆ ನೀಡಿದರು
ಜೆಡಿಎಸ್ ವತಿಯಿಂದ ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಪಡೆದು ಧರ್ಮಧಿಕಾರಿ ವೀರೇಂದ್ರ ಹೆಗ್ಡೆ ಅವರನ್ನು ಭೇಟಿ ಮಾಡಿ ಧೈರ್ಯ ತುಂಬುವುದು ಈ ಸತ್ಯ ಯಾತ್ರೆಯ ಉದ್ದೇಶವಾಗಿದೆ ಎಂದರು ಎಂದು ಕೆ ಎಸ್ ಮಂಜೇ ಗೌಡ ತಿಳಿಸಿದರು..
ಈ ಸಂದರ್ಭ ಜೆಡಿಎಸ್ ಮುಖಂಡರಾದ
ಆಲೂರು ರಾಜ್ಯ ಜೆಡಿಎಸ್ ಪಕ್ಷದಿಂದ ಸತ್ಯ ಯಾತ್ರೆಗೆ ಪಾಳ್ಯ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಆಲೂರಿನ ಪಾಳ್ಯ ಗ್ರಾಮದಲ್ಲಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಧರ್ಮಸ್ಥಳದ ಹೆಸರನ್ನು ಮುಂದಿಟ್ಟುಕೊಂಡು ಆ ಪುಣ್ಯಕ್ಷೇತ್ರಕ್ಕೆ ಕಪ್ಪು ಚುಕ್ಕಿಯನ್ನು ತರಲು ಪ್ರಯತ್ನಿಸುತ್ತಿರುವುದು ಒಂದು ಹೇಯ್ಯ ಕೃತ್ಯವಾಗಿದೆ. ಇದನ್ನು ಖಂಡಿಸಿ ಪಕ್ಷದ ನಾಯಕರಾದ ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಯವರು ಈ ಧರ್ಮ ಯಾತ್ರೆಗೆ ಚಾಲನೆ ನೀಡಿದ್ದಾರೆ ಎಂದರು.
ಸಿ.ವಿ ಲಿಂಗರಾಜು, ಪಿ.ಎಲ್. ನಿಂಗರಾಜು, ಕೆ.ಎನ್. ಕಾಂತರಾಜು ಮಗ್ಗೆ, ನಟರಾಜ್ ನಾಕಲಗೂಡು, , ಅಜೇಗೌಡ, ಪ್ರಕಾಶ್, ನಂಜೇಗೌಡ, ಜಯಪ್ಪ, ಯೋಗೇಶ್, ಮಂಜೇಗೌಡ ಹೋತನಹಳ್ಳಿಪುರ, ರಾಜೇಗೌಡ ಮಣಿಪುರ, ದೊರೆಸ್ವಾಮಿ ಬಸವೇಶಪುರ, ಮಂಜು ಹುಣಸವಳ್ಳಿ, ಜಯಪಾಲು ಹಂತನಮನೆ, ಪ್ರವೀಣ್, ನಾಗರಾಜು, ರಮೇಶ್ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
