4 ವರ್ಷಗಳಾದರೂ ರಸ್ತೆ ದುರಸ್ತಿ ಮಾಡದ ಪಿ.ಡಬ್ಲ್ಯೂ ಅಧಿಕಾರಿಗಳು.
( ಸಕಲೇಶಪುರ – ಸೋಮವಾರಪೇಟೆ ತಾಲೂಕಿಗೆ ಸಂಪರ್ಕ ಕಲ್ಪಿಸುವ ರಸ್ತೆ, ತಂಬಲಗೇರಿ ಗ್ರಾಮಸ್ಥರಿಂದ ಪಿ.ಡಬ್ಲ್ಯೂ ಅಧಿಕಾರಿ ವಿರುದ್ಧ ಆಕ್ರೋಶ.)
ಸಕಲೇಶಪುರ :- ಸಕಲೇಶಪುರ ಹಾಗೂ ಸೋಮವಾರಪೇಟೆ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ವಣಗೂರು ಕೂಡಿಗೆಯಿಂದ ಕೂತಿ ಮಾರ್ಗವಾಗಿ ಸೋಮವಾರಪೇಟೆ ಕಡೆಗೆ ಹೋಗುವ ರಸ್ತೆಯ ತಂಬಲಗೇರಿ ಗ್ರಾಮದ ಸಮೀಪ ಕಳೆದ 4 ವರ್ಷದ ಹಿಂದೆ ಮಳೆಗೆ ರಸ್ತೆ ಕುಸಿಯುವ ಹಂತಕ್ಕೆ ತಲುಪಿತ್ತು.ಇದರ ಬಗ್ಗೆ ಮಾಧ್ಯಮಗಳ ಮೂಲಕ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಪಿ.ಡಬ್ಲ್ಯೂ ಡಿ ಅಧಿಕಾರಿ ಇದುವರೆಗೂ ಯಾವುದೇ ರೀತಿ ರಸ್ತೆಗೆ ದುರಸ್ತಿ ಮಾಡಲು ಮನಸ್ಸು ಮಾಡಿಲ್ಲ. ಇಂತಹ ನಿರ್ಲಕ್ಷ ವಹಿಸುವ ಅಧಿಕಾರಿಗಳಿಂದ ಅಭಿವೃದ್ಧಿ ಹೇಗೆ ಕಾಣುವುದು ಎಂದು ತಾಲ್ಲೂಕು ಕರವೇ ಹೆತ್ತೂರು ಗೌರವ ಅಧ್ಯಕ್ಷರಾದ ಆನಂದ್ ಉಡ್ರೆಮನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕಳೆದ ನಾಲ್ಕು ವರ್ಷಗಳ ಹಿಂದೆ ಜೋರು ಮಳೆಗೆ ಮಣ್ಣು ಕುಸಿಯುತ್ತ ರಸ್ತೆಯ ಅಂಚಿನವರೆಗೆ ಬಂದಿತ್ತು . ಇದರಿಂದ ಈ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗದೆ ಇದ್ದಾಗ ಗ್ರಾಮಸ್ಥರೆಲ್ಲ ರಸ್ತೆಯ ಪಕ್ಕ ಮರಳನ್ನು ಹಾಕಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಈ ಭಾರಿಯ ಜೋರು ಮಳೆಯಿಂದ ಮತ್ತೆ ರಸ್ತೆ ತುಂಡಾಗುವ ಹಂತಕ್ಕೆ ಬಂದಿದೆ.
ವಾಹನ ಚಾಲಕರು ಆತಂಕದಿಂದ ವಾಹನ ಸಂಚರಿಸುವಂತಗಿದ್ದು ಯಾವಾಗ ಬೇಕಾದರೂ ರಸ್ತೆ ತುಂಡಾಗಿ ವಾಹನ ಸಂಚಾರ ಸ್ಥಗಿತಗೊಳ್ಳುವ ಅಂತಕ ಇದೆ. ಈ ಸಮಸ್ಯೆ ಬಗ್ಗೆ ಅನೇಕ ಬಾರಿ ಪಿ. ಡಬ್ಲ್ಯೂ ಡಿ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಈ ಸಮಸ್ಯೆಯತ್ತ ಗಮನ ಹರಿಸುತ್ತಿಲ್ಲ. ಮುಂದಿನ ದಿನದಲ್ಲಿ ಆಗುವ ಅನಾಹುತಕ್ಕೆ ನೇರವಾಗಿ ಪಿ.ಡಬ್ಲ್ಯೂ ಅಧಿಕಾರಿಗಳೇ ಹೊಣೆಯಗಳಿದ್ದಾರೆ. ಎಂದು ಗ್ರಾಮಸ್ಥರಾದ ಅರುಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಯಾತ್ತ ಕೂಡಲೇ ಗಮನ ಹರಿಸಿ ಕುಸಿಯುವ ಹಂತದಲ್ಲಿರುವ ರಸ್ತೆಯನ್ನು ಸರಿಪಡಿಸಿಕೊಡದಿದ್ದರೆ ಮುಂದಿನ ದಿನದಲ್ಲಿ ಪಿ. ಡಬ್ಲ್ಯೂ ಡಿ ವಿರುದ್ಧ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕರವೇ ತಾಲ್ಲೂಕು ಅಧ್ಯಕ್ಷರಾದ ಗಗನ್ ಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಂಬಲುಗೇರೆ ಗ್ರಾಮಸ್ಥರಾದ ಪೂರ್ಣೇಶ್,ಆನಂದ ಶೆಟ್ರು, ಕರವೇ ಕಾರ್ಯಕರ್ತರಾದ ಸಂಚಾಲಕರು ಷಣ್ಮುಖ ವಣಗೂರು, ನಿಶಾಂತ್ ಬ್ಯಾಗಡಹಳ್ಳಿ,ಸುಪ್ರೀತ್ ಗೊದ್ದು ಇದ್ದರು
