2025-26 ನೇ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟ್ರ ರಾಜ್ಯದ ನಾಗಪುರ ದೀಕ್ಷಾ ಭೂಮಿಯಲ್ಲಿ ದಿನಾಂಕ:೦2.10.2025 ರಂದು ನಡೆಯಲಿರುವ ದಮ್ಮ ಪ್ರವರ್ತನ ದಿನಕ್ಕೆ ನಾಗಪುರದ ದೀಕ್ಷಾಭೂಮಿಗೆ ಕಳುಹಿಸುವ ಸಂಬಂಧ ತಾಲೂಕುವಾರು ಯಾತ್ರಾರ್ಥಿಗಳನ್ನು ಆಯ್ಕೆ ಮಾಡಿ ಕೆ. ಎಸ್.ಆರ್.ಟಿ.ಸಿ. ಬಸ್ ಮೂಲಕ ಕಳುಹಿಸಲು ಸರ್ಕಾರದಿಂದ ಆದೇಶವಾಗಿರುತ್ತದೆ.
ಅದರಂತೆ ಸಕಲೇಶಪುರ ತಾಲೂಕಿನ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳು ದೀಕ್ಷಾ ಭೂಮಿ ಯಾತ್ರೆಗೆ ದಿನಾಂಕ 30.09 2025 ರಿಂದ 04/10/2025 ರ ವರೆಗೆ ಪ್ರಯಾಣಿಸಿ ಹಾಗೂ ಹಿಂದಿರುಗಿ ಬರುವ ಸಂಬಂಧ ಕೆ.ಎಸ್.ಆರ್.ಟಿ.ಸಿ. ಬಸ್ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಅರ್ಹ ಯಾತ್ರಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್ ಸೈಟ್ https://swd.karnataka.gov.in/ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಸಕಲೇಶಪುರ ತಾಲೂಕಿನ ಯಾತ್ರಾರ್ಥಿಗಳು ದಿನಾಂಕ: 25.08.2025 ರಿಂದ 09.09.2025 ರವರೆಗೆ ತಮ್ಮ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಿ ಅರ್ಜಿಯ ಪ್ರತಿಯ ಜೊತೆಗೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್,ಆಧಾರ್ ಕಾರ್ಡ್, 02 ಪಾಸ್ ಪೋರ್ಟ್ ಅಳತೆ ಭಾವಚಿತ್ರ ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿಗಳನ್ನು ಕಛೇರಿಗೆ ಸಲ್ಲಿಸಲು ಸಹಾಯಕ ನಿರ್ದೇಶಕರು,ಸಮಾಜ ಕಲ್ಯಾಣ ಇಲಾಖೆ, ಸಕಲೇಶಪುರ ರವರು ಪ್ರಕಟಣೆಯಲ್ಲಿ ಕೋರಿರುತ್ತಾರೆ.

