ವನಗೂರು ಗೊದ್ದು ಪ್ರಾಥಮಿಕ ಕೃಷಿ ಪತ್ತಿನ ಸಂಘದ
ಸಾಮಾನ್ಯ ಸಭೆಯಲ್ಲಿ ದಲಿತ ಸದಸ್ಯರಿಗೆ ಆಸನ ಇಲ್ಲದೆ ಮುಜುಗರ ಆಕ್ರೋಶ ವ್ಯಕ್ತಪಡಿಸಿದ
ವಿ ಎಂ ವಸಂತ್ ಕುಮಾರ್.
ಸಕಲೇಶಪುರ ತಾಲೂಕು ಗೊದ್ದು ಪ್ರಾಥಮಿಕ ಕೃಷಿ ಪತ್ತಿನ ಸಂಘ.ನಿ.ವನಗೂರು ಎಚ್ ಪಿ ಯಲ್ಲಿ ಚುನಾವಣೆ ಯಲ್ಲಿ (ಪರಿಶಿಷ್ಟ ಜಾತಿ) ಸಾಲಗಾರ ಕ್ಷೇತ್ರದಲ್ಲಿ ಜಯಗಳಿಸಿದ ವಿ ಎಂ ವಸಂತ್ ಕುಮಾರ್ ರವರಿಗೆ ಅವಮಾನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ದಿನಾಂಕ 23.07. 2025 ರಂದು ಆಡಳಿತ ಮಂಡಳಿಯ ಸದಸ್ಯರ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ತುಸು ಲೇಟಾಗಿ ವಿ ಎಂ ವಸಂತ್ ಕುಮಾರ್ ರವರು ಸಭೆಗೆ ಆಗಮಿಸುತ್ತಾರೆ
ಆದರೆ ಇವರಿಗೆ ಇರಬೇಕಾದ ಆಸನ ಇಲ್ಲದೆ ಎಲ್ಲಾ ಸದಸ್ಯರ ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿ ಅವಮಾನಕ್ಕೆ ಒಳಗಾದರು.
ಇದನ್ನು ಸಮರ್ಥಿಸಿ ಕೊಳ್ಳುವ ಹಾಗೆ ಕೆಲವು ಲೋಪಗಳಾಗಿದೆ ಸರಿಪಡಿಸುತ್ತೇವೆ ಎಂದು ಕಾರ್ಯದರ್ಶಿಯು
ವಸಂತ ಕುಮಾರ್ ರವರು ಆಕ್ರೋಶ ವ್ಯಕ್ತಪಡಿಸಿದ ನಂತರ ಕಾರಣ ಕೊಡಲು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆಡಳಿತ ಮಂಡಳಿಯ ಸದಸ್ಯರ ಸಭೆ ಗೆ ಸದಸ್ಯರು ಇರುವಷ್ಟು ಚೇರ್ ಹಾಕಿಸಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲವೇ
ಸದಸ್ಯರೂ ಸಭೆಗೆ ಹಾಜರಾಗದಿದ್ದರು ಸಹಾ ಆ ಕುರ್ಚಿಯನ್ನು ಆಯಾ ಸದಸ್ಯರಿಗೆ ಮೀಸಲಿಡಬೇಕು.
ಜನರು ಆಯ್ಕೆ ಮಾಡಿ ಜಯಗಳಿಸಿದ ಒಬ್ಬ ಸದಸ್ಯರಿಗೆ ಈ ಪರಿಸ್ಥಿತಿ ನಿರ್ಮಾಣವಾಗಿದೆ ಇನ್ನು ಸಾಮಾ ನ್ಯ ಜನರ ಪರಿಸ್ಥಿತಿ ಹೇಗೆ ?
ಎಂದು ಊಹಿಸಲು ಸಾಧ್ಯವಿಲ್ಲ ಎಂದು ಸದಸ್ಯ ವಸಂತ್ ಕುಮಾರ್ ಅವರು ಪತ್ರಿಕೆಗೆ ತಿಳಿಸಿದ್ದಾರೆ.
ಈ ಘಟನೆಯನ್ನು
ಮಲೆನಾಡು ಭೀಮ ಧ್ವನಿ ಸಂಘ (ರಿ) ಅಧ್ಯಕ್ಷರಾದ ನಾಗೇಶ್ ಎಂ ಹೆಚ್ ಮಾಗೇರಿ ಮತ್ತು ಕಾರ್ಯದರ್ಶಿ ಸುರೇಶ್ ಬಿ ಡಿ ಮತ್ತು ಪದಾಧಿಕಾರಿಗಳು
ಕಾರ್ಯದರ್ಶಿ ಬೆಳ್ಳಿ ಗೌಡ ರವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಜೊತೆಗೆ ಮುಂದಿನ ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಸದಸ್ಯ ರಾದ ವಿ ಎಂ ವಸಂತ್ ಕುಮಾರ್ ರವರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
