ಆಲೂರು : ಜನಪ್ರತಿನಿಧಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮ ವ್ಯಾಪ್ತಿಯ ಶಾಲಾ ಸಿಬ್ಬಂದಿಗಳು, ಸಹಕಾರಿ ಸಂಘದ ಸದಸ್ಯರು, ಗ್ರಾಮದ ಮುಖಂಡರು ಸೇರಿ ಸ್ವಾತಂತ್ರ್ಯ ದಿನಾಚರಣೆಯನ್ನು, ಅತಿ
ವಿಜೃಂಭಣೆಯಿಂದ, ಹಬ್ಬದ ಸಡಗರದಂತೆ ಆಚರಿಸಿ 18 ಹಳ್ಳಿಗಳ ಗ್ರಾಮಸ್ಥರ ಮನಸ್ಸನ್ನು ಮುದುಗೊಳಿಸಿದ ವಿಶೇಷ ಕಾರ್ಯಕ್ರಮ ತಾಲೂಕಿನಲ್ಲಿ ಜರುಗಿತು.
ಆಲೂರು ತಾಲೂಕಿನ ಕುಂದೂರು ಹೋಬಳಿ ಕದಾಳು ಗ್ರಾಮ ಪಂಚಾಯತಿ ಆವರಣದಲ್ಲಿ, ಸರ್ಕಾರಿ ಪ್ರಾಥಮಿಕ ಪ್ರೌಢಶಾಲೆ, ಹಾಗೂ ಗ್ರಾಮ ಪಂಚಾಯಿತಿ ಸ ಹಾಯೋಗದೊಂದಿಗೆ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮೇಗೌಡ ಧ್ವಜಾರೋಹಣವನ್ನು ನೆರವೇರಿಸಿ, ಮಾತನಾಡಿದರು. ಸ್ವತಂತ್ರ ನಂತರದಲ್ಲಿ ಭಾರತ ದೇಶ, ವಿಜ್ಞಾನ ತಂತ್ರಜ್ಞಾನ, ಆಧುನಿಕ ಆವಿಷ್ಕಾರಗಳು, ಬಾಹ್ಯಾಕಾಶ ಸಂಶೋಧನೆಗಳು, ಕ್ರೀಡಾ ಲೋಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದರು ಸಹ, ಮಾನವೀಯತೆ ಮನುಷ್ಯತ್ವ, ಸಮಾನತೆ ನೀಡುವಲ್ಲಿ ಇನ್ನು ಪರಿಪೂರ್ಣತೆ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕದಾಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮಾತನಾಡಿ, ಲಕ್ಷಾಂತರ ಜನರ ಹೋರಾಟ, ರಕ್ತ ಬಲಿದಾನ, ಸ್ವಾಭಿಮಾನದಿಂದ, ದೇಶ ಸ್ವಾತಂತ್ರ್ಯಗೊಂಡಿದ್ದು, ಮಹಾನ್ ನಾಯಕರ ತತ್ವ ಆದರ್ಶಗಳನ್ನು ಇಂದಿನ ಯುವ ಜನತೆ ಅಳವಡಿಸಿಕೊಳ್ಳುವುದರ ಜೊತೆಗೆ ದೇಶಕ್ಕೆ ನವೀನತೆಯ ಆವಿಷ್ಕಾರ, ವಿಚಾರಧಾರೆ, ಸಂಸ್ಕಾರಗಳನ್ನು ಕೊಡುಗೆಯನ್ನಾಗಿ ಕೊಡಬೇಕೆಂದು ತಿಳಿಸಿದರು.
ಕದಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 18 ಹಳ್ಳಿ ಗ್ರಾಮಸ್ಥರ ಸಹಕಾರದೊಂದಿಗೆ, ನೂರಾರು ಸ ಭೀಕರ ಸಮ್ಮುಖದಲ್ಲಿ ಗ್ರಾಮೀಣ ಭಾಗದಲ್ಲಿ ಹುಟ್ಟಿ ಬೆಳೆದು ದೇಶ ಸೇವೆ ಮಾಡಿದ ನಾಲ್ಕು ಜನ ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕದಾಳು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೆಡಿಕಲ್ ಫ್ರೀ ಸೀಟ್ ಪಡೆದ ವಿದ್ಯಾರ್ಥಿ, ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಆಲೂರು ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದು ತಾಲೂಕನ್ನು ಪ್ರತಿನಿಧಿಸಿದ ಕದಾಳು ಪ್ರೌಢಶಾಲೆಯ ವಿದ್ಯಾರ್ಥಿನಿ ಪೂಜಾ ಎಚ್ ಕೆ, 616 ಅಂಕಗಳಿಸಿ ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಈ ವಿದ್ಯಾರ್ಥಿನಿಗೆ ವಿಷಯವಾರು ಶಿಕ್ಷಕರು ನಗಬಹುದು ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಹತ್ತಾರು ಹಳ್ಳಿಗಳಿಂದ ಸೇರಿದ್ದ ಸ್ವತಂತ್ರೋತ್ಸವ ಸಂಭ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ತಂದೆ ತಾಯಿಗಳು, ಗ್ರಾಮಸ್ಥರು ಹಾಗೂ ಮುಖಂಡರುಗಳಿಗೆ ಮನೋರಂಜನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕದಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮೇಗೌಡ(ಕಾಂತರಾಜು), ಉಪಾಧ್ಯಕ್ಷೆ ಶೇತ ಎನ್ ಪಿಡಿಒ ಶಿವಕುಮಾರ್, ಕಾರ್ಯದರ್ಶಿ ದಿಲೀಪ್, ಸದಸ್ಯರಾದ ದೇವರಾಜು, ಸೋಮಶೇಖರ್, ಪುಟ್ಟರಾಜು, ಮುಕ್ತಶ್, ನೀಲಮ್ಮ, ಶಿವಕುಮಾರ್, ಸುಧಾ, ನಾಗರಾಜು, ಮಾಜಿ ಅಧ್ಯಕ್ಷ ಶಾಂತಪ್ಪ, ಬಿಜೆಪಿ ಮಾಜಿ ಅಧ್ಯಕ್ಷ ಲೋಕೇಶ್, ಜೆ. ಡಿ. ಎಸ್ ಪಕ್ಷದ ಮುಖಂಡರಾದ ರಾಜಪ್ಪಗೌಡ, ಹಾಲಿನ ಡೈರಿ ಅಧ್ಯಕ್ಷ ಪ್ರವೀಣ್ ಕುಮಾರ್, ಮಾಜಿ ಅಧ್ಯಕ್ಷ ರಾಮಚಂದ್ರ, ಕಿರಗಡಲು ಸೊಸೈಟಿ ಮಾಜಿ ಅಧ್ಯಕ್ಷ ರುದ್ರೇಗೌಡ, ಹಿರಿಯ ಮುಖಂಡರಾದ ಡಿ.ಕೆ ಸ್ವಾಮಿಗೌಡ, ಪಟ್ಟಣ ದಿನೇಶ್, ಜಯಣ್ಣ ಮುತ್ತಿಗೆ, ಮಹೇಂದ್ರ. ಹಾಗೂ ಕದಾಳು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಪಾಂಡುರಂಗಯ್ಯ, ಸಹಶಿಕ್ಷಕರ ವೃಂದ, ಎಸ್. ಡಿ ಎಂ. ಸಿ ಅಧ್ಯಕ್ಷ ಪ್ರೇಮಕುಮಾರ್, ಸಮಿತಿ ಸದಸ್ಯರು, ಕದಾಳು ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕಲ್ಪನ ಹಾಗೂ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮೇಶ್ ಹಾಗೂ ಸಮಿತಿ ಸದಸ್ಯರು, ಕದಾಳು ಪ್ರೌಢಶಾಲೆ ಶಿಕ್ಷಕರಾಧ ಧರ್ಮ, ನಿವೃತ್ತ ಇಂಜಿನಿಯರ್ ಕೆ.ಆರ್ ರಮೇಶ್, ನಿವೃತ್ತ ಶಿಕ್ಷಕ ಹಲಗೆ ಗೌಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮಹಿಳೆಯರು ಮಕ್ಕಳು ಹಾಜರಿದ್ದರು
