ನಿನ್ನೆ ಸುರಿದ ಧಾರಾಕಾರ ಮಳೆಗೆ ಶಿರಾಡಿ ಘಾಟ್ ನಲ್ಲಿ ಕಾರಿನ ಮೇಲೆ ಗುಡ್ಡ ಕುಸಿದ ಘಟನೆ ವರದಿ ಆಗಿದೆ.
ನಿನ್ನೆ ಮೇಘ ಸ್ಫೋಟದ ರೀತಿಯಲ್ಲಿ ಘಾಟ್ ನಲ್ಲಿ ಮಳೆ ಸುರಿದಿತ್ತು.
ಮಣ್ಣು ಕುಸಿದ ಸಂದರ್ಭದಲ್ಲಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ತಂಡ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಉಪ ವಿಭಾಗ ಅಧಿಕಾರಿಗಳು ಶ್ರಮ ಪಟ್ಟರು.


