ಆಲೂರು : ತಮ್ಮ ಹಕ್ಕು ಪಡೆದುಕೊಳ್ಳಬೇಕಾದರೆ ಸಂಘಟನೆ ಬಹು ಮುಖ್ಯ,ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಿಂದಲೇ ಈ ನಾಡಿನ ಜನರ ಪರವಾಗಿ ಹಲವು ಹೋರಾಟ ಮಾಡುತ್ತಾ ಬಂದಿದೆ ಎಂದು ಹಾಸನ ಜಿಲ್ಲಾ ಕರವೇ ಅಧ್ಯಕ್ಷ ಸಿ.ಡಿ.ಮನುಕುಮಾರ್ ಹೇಳಿದ್ದಾರೆ.
ಅವರು ಆಲೂರು ಪಟ್ಟಣದ ಲಯನ್ಸ್ ಕ್ಲಬ್ ಭವನದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕನ್ನಡವೇ ಜಾತಿ,ಧರ್ಮ ಅನ್ನುವುದನ್ನು ಪಾಲಿಸುತ್ತಾ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ನೇತೃತ್ವದಲ್ಲಿ ನಾಡಿನ ಜಲ,ನೆಲ ವಿಷಯದಲ್ಲಿ ಹಲವು ಹೋರಾಟ ಮಾಡುತ್ತಾ ನಾಡಿನ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದೆ ಶೇ.60 ರಷ್ಟು ಅನ್ಯ ಭಾಷಿಗರಿರುವ ಬೆಂಗಳೂರು ಮಹಾ ನಗರದಲ್ಲಿ ನಮ್ಮ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ಕನ್ನಡ ಉಳಿವಿಗಾಗಿ ಹಲವು ಹೋರಾಟ ಮಾಡುವ ಮೂಲಕ ಸರ್ಕಾರ ಶೇ. 60 ರಷ್ಟು ನಾಮಪಲಕಗಳು ಕನ್ನಡದಲ್ಲಿರಬೇಕು ಎನ್ನುವ ಸುಗ್ರೀವಾಜ್ಞೆ ತಂದು ಅನ್ಯ ಭಾಷೆಯ ನಾಮ ಫಲಕಗಳಿಗೆ ಕಡಿವಾಣ ಹಾಕಲಾಗಿದೆ ರಾಜ್ಯದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳಲ್ಲಿ ಇಂದು ಕೂಡ ದೊಡ್ಡ ದೊಡ್ಡ ಹುದ್ದೆಯಲ್ಲಿ ಅನ್ಯ ಭಾಷಿಗರೆ ಕಾರ್ಯನಿರ್ವಹಿಸುತ್ತಿದ್ದಾರೆ ಯುವಕರು ಕೆಲಸ ಪಡೆದುಕೊಳ್ಳಬೇಕಾದರೆ ಹೋರಾಟ ಅನಿವಾರ್ಯವಾಗಿದೆ ಆದ್ದರಿಂದ ಕರ್ನಾಟಕ ರಕ್ಷಣಾ ವೇದಿಕೆ ಇನ್ನಷ್ಟು ಸಂಘಟನೆ ಗಟ್ಟಿಗೊಳಿಸುವ ಸಲುವಾಗಿ ಯುವ ಕಾರ್ಯಕರ್ತರನ್ನು ಸೇರಿಸಿಕೊಳ್ಳುವ ಮೂಲಕ ಸದಸ್ಯತ್ವ ನೀಡಲಾಗುತ್ತಿದೆ ಹೆಚ್ಚೆಚ್ಚು ಕಾರ್ಯಕರ್ತರು ಸೇರ್ಪಡೆಗೊಳ್ಳುವ ಮೂಲಕ ನಾರಾಯಣಗೌಡ ಅವರ ಕೈ ಬಲಪಡಿಸೋಣ ಎಂದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತನುಗೌಡ ಮಾತನಾಡಿ ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ಅವರ ನೇತೃತ್ವದಲ್ಲಿ ನಾಡಿನ ನೆಲ ಜಲ ಭಾಷೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಹಲವು ಹೋರಾಟಗಳನ್ನು ಮಾಡುತ್ತಾ ಈ ನಾಡಿಗೆ ಗೌರವ ತಂದು ಕೊಡುವಂತಹ ಕೆಲಸ ಆಗಿದೆ ಆದ್ದರಿಂದ ಹೆಚ್ಚೆಚ್ಚು ಕಾರ್ಯಕರ್ತರು ನಾರಾಯಣಗೌಡರು ಹಾಗೂ ಮನುಕುಮಾರ್ ಅವರ ನೇತೃತ್ವದಲ್ಲಿ ರಕ್ಷಣಾ ವೇದಿಕೆ ಸೇರುವ ಮೂಲಕ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು ಎಂದರು.
ಕರವೇ ತಾಲೂಕ ಅಧ್ಯಕ್ಷ ನಟರಾಜ ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆ ಜನಸಾಮಾನ್ಯರು ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಸಂದರ್ಭದಲ್ಲಿ ಹಲವು ಹೋರಾಟಗಳನ್ನು ಮಾಡುವ ಮೂಲಕ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದೆ ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡರು ನೆಲ, ಜಲ, ಭಾಷೆ ವಿಚಾರ ಬಂದಾಗ ಯಾವುದೇ ರಾಜಿ ಮಾಡಿಕೊಳ್ಳದೇ ಕನ್ನಡಿಗರಿಗೆ ಗೌರವ ತಂದು ಕೊಡುವ ಕೆಲಸವಾಗಿದೆ ಆದ್ದರಿಂದ ಹೆಚ್ಚಚ್ಚು ಕಾರ್ಯಕರ್ತರು ಸಂಘಟನೆ ಸೇರಿ ನಾರಾಯಣಗೌಡರ ಕೈ ಬಲಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತನುಗೌಡ,ತಾಲೂಕ ಅಧ್ಯಕ್ಷ ನಟರಾಜ್,ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಲಯನ್ಸ್ ಕ್ಲಬ್ ತಾಲೂಕ ಅಧ್ಯಕ್ಷ ಬಿ ಮಂಜೇಗೌಡ, ಕರವೇ ಉಪಾಧ್ಯಕ್ಷರುಗಳಾದ ಶಶಿ. ನವೀನ್ ಬೈರಾಪುರ. ಮೋಹನ.ಹಾಗೂ ಕರವೇ ನೂರಾರು ಬಂಧುಗಳು ಇದ್ದರು.

