*ಕೆಪಿಎಸ್ ಹೆತ್ತೂರು; ಸ್ವಾತಂತ್ರ್ಯ ದಿನಾಚರಣೆ*
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು.
ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹರೀಶ್ ಕರಡಿಗಾಲರವರು ನೆರವೇರಿಸಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ 5 ಜನ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು.
ಮಾಜಿ ಸೈನಿಕ ಕುಶಾಲಪ್ಪ ಹೆಚ್.ಕೆ, ಸಮಾಜ ಸೇವಕರು ಮತ್ತು ದಾನಿಗಳಾದ ನಾಗೇಶ್ ಹೆಚ್.ಜಿ, ಶ್ರೀ ಕುಶಾಲಪ್ಪ ಹೆಚ್.ಎಸ್. ರಾಜೇಗೌಡ ಹೆಚ್.ಎಸ್, ಪತ್ರಕರ್ತರಾದ ಜಗದೀಶ ಹೆಚ್.ಅರ್.ರವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲರಾದ ಮಂಜುನಾಥ ಬಿ.ಡಿ. ಉಪಪ್ರಾಂಶುಪಾಲ ಭಾಸ್ಕರ ಬಿ. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಹೆಚ್.ಕೆ. ನಿವೃತ್ತ ಶಿಕ್ಷಕ ಸತ್ಯಮೂರ್ತಿ ಮೊದಲಾದವರು ವೇದಿಕೆಯಲ್ಲಿದ್ದರು.

