ಆಲೂರುನಲ್ಲಿ ಹಲವಾರು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ನವೀನ್ ಬೈರಾ ಫುರರನ್ನು ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ನವೀನ್ ಬೈರಾಪುರರವರು ಮಲ್ನಾಡ್ ಶಾಡೋ, ಉದಯವಾಣಿ ಹಾಗೂ ನಾಡ ಸಹ್ಯಾದ್ರಿ ಪತ್ರಿಕೆಗಳ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಮಾಜಿಕವಾಗಿ ಕೂಡಾ ಹಲವಾರು ಕಾರ್ಯ ಮಾಡುವ ಮೂಲಕ ಸಮಾಜ ಮುಖಿಯಾಗಿರುವ ಇವರ ಸೇವೆ ಅನನ್ಯ ಆದುದು.
ಆಲೂರು ತಾಲೂಕು ಕ್ರೀಡಾಂಗಣಕ್ಕೆ ಮೂಲ ಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕೂಡ ಇವರು ಹೋರಾಟ ಮಾಡಿದ್ದರು


