ಸಕಲೇಶಪುರದ ಮಂಜರಾ ಬಾದ್ ಕೋಟೆಯ ಸುಸ್ಥಿತಿ ಕಾಪಾಡುವಂತೆ ವಿವಿಧ ಸಂಘಟನೆಗಳು ಉಪ ವಿಭಾಗ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಕೋಟೆ ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಬಿದ್ದು ಹೋಗುತ್ತಿದೆ. ಈ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈ ಗೊಳ್ಳುವಂತೆ ಆಗ್ರಹಿಸಲಾಯಿತು.
ವರ್ತಕರ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಆಳ್ವಾ, ಮಲ್ನಾಡ್ ಮೆಹಬೂಬ್, ರವಿ, ಜೈ ಭೀಮ್ ಮಂಜು, ಮಲ್ನಾಡ್ ರಕ್ಷಣಾ ಸೇನೆಯ ರಾಜ್ಯ ಅಧ್ಯಕ್ಷ ಸಾಗರ್ ಜಾನೇ ಕೆರೆ ಮತ್ತಿತರರು ಈ ಸಂದರ್ಭದಲ್ಲಿದ್ದರು.
