*ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವಿಶಿಷ್ಟ ಆಚರಣೆ*
3 ಬಣ್ಣದ ಚಕ್ಲಿಯಲ್ಲಿ ರಾಷ್ಟ್ರಧ್ವಜದ ಪ್ರತಿರೂಪ*
ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿಯಲ್ಲಿ ಬಹಳ ವಿಶೇಷವಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾದ ಈ ದಿನದಂದು ಈ ಉತ್ಸವವನ್ನು ಇನ್ನಷ್ಟು ಮೆರಗುಗೊಳಿಸಲು ಮಳಿಗೆಯನ್ನು ವಿಶೇಷವಾಗಿ ಅಲಂಕರಿಸಿ 3 ಬಣ್ಣದ ಚಕ್ಲಿಯಲ್ಲಿ ರಾಷ್ಟ್ರಧ್ವಜದ ಪ್ರತಿಕೃತಿಯನ್ನು ತಯಾರಿಸಿ ಇಂದಿನಿಂದ 10 ದಿನಗಳವರೆಗೆ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ಕಳೆದ ವರ್ಷ ಚಿಕ್ಕಿಯಲ್ಲಿ ತಯಾರಿಸಿದ ತಿರಂಗ ಧ್ವಜದ ಪ್ರತಿಕೃತಿ ಬಹಳ ಪ್ರಶಂಸೆಗೆ ಒಳಪಟ್ಟಿತ್ತು.
ಇದು ನಮ್ಮ ರಾಷ್ಟ್ರೀಯ ಹೆಮ್ಮೆ. ಏಕತೆ ಮತ್ತು ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಗಳ ಪ್ರತಿಬಿಂಬದ ದಿನ. ಸಾರ್ವಭೌಮ ರಾಷ್ಟ್ರವಾಗಿ ಭಾರತದ ಪ್ರಯಾಣದ ಆರಂಭ. ಭಾರತವು ತನ್ನ 79 ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಪ್ರತಿ ವರ್ಷ ಕಳೆದಂತೆ ನಮ್ಮ ರಾಷ್ಟ್ರವು ಬಲವಾಗಿ, ಪ್ರಕಾಶಮಾನವಾಗಿ ಮತ್ತು ಹೆಚ್ಚು ಸಮೃದ್ಧವಾಗಿ ಬೆಳೆಯುವುದನ್ನು ಮುಂದುವರಿಸಲಿ.
ಸಾಲು ಸಾಲು ಹಬ್ಬಗಳ ಈ ಸಂದರ್ಭದಲ್ಲಿ ಗ್ರಾಹಕರು ಉತ್ತಮ ಗುಣಮಟ್ಟದ ಚಿಕ್ಕಿ (ಕಡ್ಲೆ ಮಿಠಾಯಿ), ಸಿಹಿ, ಖಾರ ತಿನಿಸುಗಳ ಖರೀದಿಯೊಂದಿಗೆ ವಿಶಿಷ್ಟ ರೀತಿಯಲ್ಲಿ ಅಲಂಕೃತಗೊಂಡಿರುವ ಮಳಿಗೆಯನ್ನು ಕಣ್ತುಂಬಿಸಿಕೊಳ್ಳಬಹುದು.
ಈ ಶುಭ ಸಂದರ್ಭದಲ್ಲಿ ಆಡಳಿತ ಮತ್ತು ಸಿಬ್ಬಂದಿ ವರ್ಗದ ಪರವಾಗಿ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇವೆ.
-ರವಿತೇಜ, CEO,
ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ


