ಆಲೂರುನಲ್ಲಿ ವಿದ್ಯಾರ್ಥಿನಿಯ ಅಪಹರಣ ಎಂಬ ವಿಚಾರವನ್ನು ಪೊಲೀಸರು ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಬೇಧಿಸಿದ್ದಾರೆ.
ಆಲೂರು ಹಂಚೂರು ಬಳಿಯ ವಿದ್ಯಾರ್ಥಿನಿಯೋರ್ವಳು ಶಾಲೆಗೆ ಬರುತ್ತಿರುವ ಸಂದರ್ಭದಲ್ಲಿ ತನ್ನನ್ನು ಮಾರುತಿ ಕಾರ್ ನಲ್ಲಿ ಅಪಹರಣ ಮಾಡಲು ಬಂದಿದ್ದಾರೆ ಎಂದು ಭಾವಿಸಿ ಅಲ್ಲಿಂದ ಓಡಿ ಶಾಲೆಗೆ ಹೋಗಿದ್ದಳು.
ಈ. ಘಟನೆ ಬಹಳಷ್ಟು ಮಂದಿಯ ಆತಂಕಕ್ಕೆ ಕಾರಣ ಆಗಿತ್ತು.
ಈ ಘಟನೆ ಬಳಿಕ ಸಂಪೂರ್ಣ ತನಿಖೆ ಮಾಡಲು ಹೊರಟ ಪೊಲೀಸರು ಅತೀ ಶೀಘ್ರವಾಗಿ ಈ ಪ್ರಕರಣದ ಬೆನ್ನಟ್ಟಿ ಅಲ್ಲಿನ ಸಿ ಸಿ ಟಿ ವಿಯನ್ನು ಪರಿಶೀಲನೆ ಮಾಡಿದ್ದಾರೆ.
ಆಗ ಆ ಮಾರುತಿ ಕಾರು ಅಲ್ಲಿಂದ ತೆರಳಿದ್ದು ತಿಳಿದು ಬಂದು ಆ ಕಾರನ್ನು ಹುಡುಕಾಟ ಮಾಡಿದಾಗ ಆ ಕಾರು ಸ್ಥಳೀಯ ಪರಿಸರದವರದ್ದು ಎಂದು ತಿಳಿದು ಬಂತು.
ಕಾರ್ ರಸ್ತೆಯಲ್ಲಿ ಬಂದು ನಿಂತಾಗ ತನ್ನನ್ನು ಅಪಹರಣ ಮಾಡಲು ಬಂದಿದ್ದಾರೆ ಎಂದು ಬಾಲಕಿ ಹೆದರಿ ಓಡಿದ್ದೆ ಈ ಘಟನೆಗೆ ಕಾರಣ ಆಗಿದೆ.
ಅಂತೂ ಆಲೂರು ಪೊಲೀಸರು ಅತೀ ಶೀಘ್ರವಾಗಿ ಈ ಪ್ರಕರಣವನ್ನು ಬೇಧಿಸಿ ಎಲ್ಲರ ಆತಂಕ ಪರಿಹಾರ ಮಾಡಿದ್ದಾರೆ.
ಆ ಕಾರು ಪಾಳ್ಯ ಹೋಬಳಿಯ ಕುಂಬಾರ ಹಳ್ಳಿಯವರದ್ದು ಎಂದು ತಿಳಿದು bandi
