ಶಾಂತಿ, ಸೌಹಾರ್ದತೆಯಿಂದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಿಸಿ.:- ಸಕಲೇಶಪುರ ತಾಲ್ಲೂಕು ವೃತ್ತ ನಿರೀಕ್ಷರಾದ ನಿರಂಜನ್ ಕುಮಾರ್
ಸಕಲೇಶಪುರ :- ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಆಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸುವ ಮೂಲಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ. ಎಂದು ಸಕಲೇಶಪುರ ತಾಲ್ಲೂಕು ವೃತ್ತ ನಿರೀಕ್ಷರಾದ ನಿರಂಜನ್ ಕುಮಾರ್ ಹೇಳಿದರು.
ತಾಲ್ಲೂಕಿನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಹಾಗೂ ಮುಸ್ಲಿಂ ಹಬ್ಬ ವಾದ ಈದ್ ಮಿಲಾದ್ ಪ್ರಯುಕ್ತ ಪಟ್ಟಣದ ಲಯನ್ಸ್ ಹಾಲ್ ನಲ್ಲಿ ಹಿಂದೂ ಮುಸ್ಲಿಂ ಶಾಂತಿ ಸಭೆಯನ್ನು ಏರ್ಪಡಿಸಲಾಗಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಗಣೇಶ ಮಂಡಳಿಯ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಪಾಲಿಸಬೇಕಾದ ನಿಯಮಗಳು ಮತ್ತು ಷರತ್ತುಗಳು ವಿವರಿಸಿದರು.
1.ಗಣಪತಿ ಮಂಡಳಿ/ಸಂಘಟನಾಕಾರರು ಒತ್ತಾಯಪೂರ್ವಕವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡಬಾರದು.
2. ಸಾರ್ವಜನಿಕ ಗಣೇಶ ಸ್ಥಳದಲ್ಲಿ ಮಾಡುವ ಮೊದಲು ಆಯಾ ಪ್ರತಿಷ್ಠಾಪನೆ ನಗರಸಭೆ/ಪಟ್ಟಣಪಂಚಾಯಿತಿ/ಪುರಸಭೆ/ಚೆಸ್ಕಾಂ/ಅಗ್ನಿ ಶಾಮಕ ಇಲಾಖೆಯವರಿಂದ ಪರವಾನಿಗೆ ಪಡೆಯಬೇಕು.
3. ಗಣಪತಿ ವಿಸರ್ಜನೆ ಮೆರವಣಿಗೆಗೆ ತಾಲ್ಲೂಕು ದಂಡಾಧಿಕಾರಿಯವರಿಂದ ಅನುಮತಿಯನ್ನು ಪಡೆಯಬೇಕು.
4. ಸಾರ್ವಜನಿಕ ರಸ್ತೆಯಲ್ಲಿ ವಾಹನ ಮತ್ತು ಜನರು ಓಡಾಟಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಬಾರದು.
5. ಖಾಸಗಿ ಮನೆ, ಅಂಗಡಿ, ದೇವಾಸ್ಥಾನ ಅಥವಾ ನೇರ ವಿದ್ಯುತ್ ಲೈನ್ ಮತ್ತು ಇನ್ನಾವುದೇ ರೀತಿ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಬಾರದು. ಕಡ್ಡಾಯವಾಗಿ ಜನರೇಟರ್ ಉಪಯೋಗಿಸತಕ್ಕದ್ದು.
6. ಪ್ರತಿ ಗಣೇಶ ಮಂಡಳಿಯ ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳ ಪಟ್ಟಿಯನ್ನು ವ್ಯಾಪ್ತಿಯ ಪೊಲೀಸ್ ಠಾಣೆಗೆ ಮುಂಚಿತವಾಗಿ ಸಲ್ಲಿಸಬೇಕು.
7. ಗಣಪತಿ ಸಂಘಟನಾಕಾರರು ಗಣಪತಿ ಮೂರ್ತಿಗಳ, ಪ್ಲೆಕ್ಸ್/ಬ್ಯಾನರ್ಗಳ ಹಾಗೂ ಇತರೆ ಸಾಮಾಗ್ರಿಗಳ ಸುರಕ್ಷತೆ ಕುರಿತಂತೆ ಎಚ್ಚರದಿಂದ ಇರತಕ್ಕದ್ದು.
8. ಗಣಪತಿ ಮೂರ್ತಿಗಳಿಗೆ ಬಂಗಾರದ ಆಭರಣಗಳನ್ನು ಹಾಕಿದ್ದಲ್ಲಿ ಅದರ ಸುರಕ್ಷತೆಯ ಜವಾಬ್ದಾರಿ ಗಣಪತಿ ಮಂಡಳಿಯವರದ್ದೇ ಆಗಿರುತ್ತದೆ.
9. ಭದ್ರತೆಯ ದೃಷ್ಟಿಯಿಂದ ಗಣಪತಿ ಮಂಡಳಿಯವರು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸತಕ್ಕದ್ದು.
10. ಧ್ವನಿವರ್ಧಕಗಳನ್ನು ಪರವಾನಿಗೆ ಪಡೆದುಕೊಂಡೇ ಉಪಯೋಗಿಸಬೇಕು ಹಾಗೂ ಸಾರ್ವಜನಿಕ ಆಸ್ಪತ್ರೆ ಮತ್ತು ಶಾಲಾ ಕಾಲೇಜುಗಳಿಗೆ ಧ್ವನಿವರ್ಧಕಗಳಿಂದ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು.
11. ಡಿಜೆ ಬಳಕೆಗೆ ನಿರ್ಬಂಧ ವಿಧಿಸಿದ್ದು, ಇದನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು.
12. ಗಣಪತಿ ಪೆಂಡಾಲ್ ಬಳಿ ಸಾಕಷ್ಟು ಬೆಳಕಿನ ವ್ಯವಸ್ಥೆ ಇರತಕ್ಕದ್ದು.
13. ಗಣೇಶ ಪ್ರತಿಷ್ಠಾಪನೆ ದಿನ, ಕಾರ್ಯಕ್ರಮಗಳ ವಿವರವನ್ನು ಮುಂಚಿತವಾಗಿ ಸರಹದ್ದಿನ ಪೊಲೀಸ್ ಠಾಣೆಗೆ ಸಲ್ಲಿಸಬೇಕು.
14. ಗಣೇಶ ಮಂಟಪದ ಬಳಿ ಮಂಡಳಿಯ ನಾಲ್ಕು ಸಂಸ್ಥೆಯ ಪ್ರತಿನಿಧಿಗಳು ದಿನದ 24 ಗಂಟೆಯು ಇರುವ ಹಾಗೆ ನೋಡಿಕೊಳ್ಳಬೇಕು.
15. ಗಣೇಶ ಮಂಟಪದೊಳಗೆ ದೀಪ ಇಡುವ ಸ್ಥಳದ ಬಳಿ ಬೆಂಕಿ ಹತ್ತುವಂತಹ ವಸ್ತುಗಳನ್ನು ಇಡಬಾರದು. ಬೆಂಕಿ ಆಕಸ್ಮಿಕದಿಂದ ಅವಘಡ ತಡೆಗಟ್ಟುವ ಸಲುವಾಗಿ ಅಕಸ್ಮಿಕ ಬೆಂಕಿ ಆರಿಸುವ ಸಲಕರಣೆಗಳಾದ ಮರಳು ಮತ್ತು ನೀರು ತುಂಬಿದ ಬಕೇಟುಗಳು, ಫೈರ್ ಎಕ್ಸ್ ಟಿಂಗ್ಲೀಷರನ್ನು ಇಟ್ಟುಕೊಳ್ಳುವುದು.
16. ಗಣೇಶ ಮಂಟಪ ಸಮೀಪ ಯಾವುದೇ ಸಣ್ಣಪುಟ್ಟ ಜಗಳ ವಾಗ್ವಾದ ಮುಂತಾದ ಘಟನೆಗಳು ಜರಗಿದಲ್ಲಿ ಗಣೇಶ ಮಂಡಳಿಯವರು ಕೂಡಲೇ ಸರಹದ್ದಿನ ಪೊಲೀಸ್ ಠಾಣೆಗೆ ತಿಳಿಸಬೇಕು.
17. ಗಣೇಶ ಮಂಡಳಿಯವರು ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು.
18. ಮುಂಗಡವಾಗಿ ಸ್ವಯಂ ಸೇವಕರು ಮತ್ತು ಗಣೇಶ ಮಂಡಳಿ ಪದಾಧಿಕಾರಿಗಳು ಉತ್ತಮ ಗುಣ ನಡತೆ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.
19. ಗಣೇಶ ಮಂಟಪದ ಹತ್ತಿರ ಮನರಂಜನಾ ಕಾರ್ಯಕ್ರಮಗಳು ನಡೆಯುವಾಗ ಹೆಚ್ಚಿನ ಗುಂಪು ಸೇರಿದಲ್ಲಿ ಸ್ವಯಂ ಸೇವಕರು/ಸಂಘಟಕರನ್ನು ನೇಮಿಸಿ ಗುಂಪನ್ನು ನಿಯಂತ್ರಿಸಬೇಕು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಸ್ಥಳಾವಕಾಶ ಮಾಡಬೇಕು.
20. ಗಣಪತಿ ವಿಗ್ರಹ ಸಾಗಿಸುವ ವಾಹನ ಸುಸ್ಥಿತಿಯಲ್ಲಿ ಇದೆಯೇ ಎಂಬುದರ ಬಗ್ಗೆ ಮುಂಚಿತವಾಗಿ ಖಚಿತಪಡಿಸಿಕೊಳ್ಳಬೇಕು.
21. ಗಣಪತಿ ಮಂಡಳಿ ಪದಾಧಿಕಾರಿಗಳು ಮತ್ತು ಸ್ವಯಂ ಸೇವಕರು ಕಡ್ಡಾಯವಾಗಿ ಬ್ಯಾಡ್ಜ್ ಧರಿಸಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು.
22. ಗಣಪತಿ ವಿಸರ್ಜನಾ ಮೆರವಣಿಗೆ ಸಮಯದಲ್ಲಿ ಪ್ರಚೋದನಾಕಾರಿ ಘೋಷಣೆ ಕೂಗುವುದು ಅಥವಾ ಪ್ರಚೋದನಾಕಾರಿ ಗೀತೆಗಳು/ಭಾಷಣಗಳನ್ನು ಮಾಡಬಾರದು.
23. ಗಣಪತಿ ವಿಸರ್ಜನೆಯ ದಿನಾಂಕ, ವೇಳೆ, ಮಾರ್ಗ ಮುಂತಾದ ವಿವರಗಳನ್ನು ಮುಂಚಿತವಾಗಿ ಸಂಬಂಧಿಸಿದ ಪಿಐ/ಸಿಪಿಐ/ಡಿಎಸ್ಪಿಯವರಿಗೆ ನೀಡಿ ಮಂಜೂರಾತಿ ಪಡೆದುಕೊಳ್ಳಬೇಕು.
24. ಪೊಲೀಸ್ ಅಧಿಕಾರಿಗಳು ನಿಗಧಿಗೊಳಿಸಿದ ಮಾರ್ಗದಲ್ಲಿಯೇ ವಿಸರ್ಜನಾ ಮೆರವಣಿಗೆ ಹೋಗಬೇಕು.
25. ಗಣಪತಿ ವಿಸರ್ಜನೆಗಳನ್ನು ಸೂರ್ಯಾಸ್ಥದ ಒಳಗೆ ಮುಕ್ತಾಯಗೊಳಿಸುವುದು.
26. ಸಮಾರಂಭಗಳ ಸಮಯ ಮತ್ತು ವಿಸರ್ಜನಾ ಮೆರವಣೆಗೆ ಸಮಯದಲ್ಲಿ ಪಾನಮತ್ತರನ್ನು ದೂರವಿಡಬೇಕು.
27. ಧಾರ್ಮಿಕ ಕಟ್ಟಡಗಳಾದ ಮಸೀದಿ, ಮದರಸ, ಚರ್ಚುಗಳ ಮೇಲೆ ಅನಗತ್ಯವಾಗಿ ಕೇಸರಿ ಬಾವುಟ & ಬ್ಯಾನರ್ಗಳನ್ನು ಕಟ್ಟಬಾರದು.
28. ವಿಸರ್ಜನಾ ಮೆರವಣೆಗೆ ಸಮಯದಲ್ಲಿ ಇತರೆ ಧರ್ಮಗಳ ವಿರುದ್ಧ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಬಾರದು.
29. ಗಣಪತಿ ಪೆಂಡಾಲ್ ಮೆಸ್ಕಾಂ/ನಗರಸಭೆ/ಅಗ್ನಿ ಶಾಮಕ ಇಲಾಖೆ/ಪಿಡಬ್ಲ್ಯೂಡಿ/ಆರೋಗ್ಯ ಇಲಾಖೆ/ಅಂಬ್ಯುಲೆನ್ಸ್/ಸ್ಥಳೀಯ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆಗಳನ್ನು ಹಾಕುವುದು.
30. ಗಣಪತಿ ಮಂಡಳಿಯವರು ವಿಸರ್ಜನಾ ಮೆರವಣಿಗೆಯ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ಸಿಡಿಯನ್ನು ನೀಡುವುದು.
31. ಗಣೇಶ ಹಬ್ಬದ ಆಚರಣೆಯ ಕಾಲಕ್ಕೆ ಮತ್ತು ವಿಸರ್ಜನೆಯ ಕಾಲಕ್ಕೆ ಕಾನೂನು ಭಂಗ ಮಾಡುವ ಪ್ರಯತ್ನ ಮಾಡುವವರ ವಿರುದ್ಧ ನಿರ್ದಾಕ್ಷಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಘದ ಪದಾಧಿಕಾರಿಗಳು ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬದ ಆಚರಣೆ ಮತ್ತು ವಿಸರ್ಜನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು, ಅಲ್ಲದೇ, ಸಂಘದ ಪದಾಧಿಕಾರಿಗಳು ಗಣೇಶ ಹಬ್ಬದ ಆಚರಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ತೊಡಗಿಸಿಕೊಳ್ಳುವುದು. ಏನಾದರೂ ಅನಾಹುತಗಳು ಸಂಭವಿಸಿದ್ದಲ್ಲಿ, ಸಂಘಟನಾಕಾರರನ್ನೇ ಹೊಣೆಗಾರರನ್ನಾಗಿ ಮಾಡಿ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಎಂದು ಹೇಳಿದರು
ಈ ಸಂದರ್ಭದಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಿಕರು ಪ್ರಸನ್ನ,ಅಪರಾಧ ವಿಭಾಗದ ಆರಕ್ಷಕ ನಿರೀಕ್ಷರಾದ ಸರ್ದಾರ್ ಪಾಸಾ,ಸೇರಿದಂತೆ ಹೆಚ್ಚಿನ ಸಂಖ್ಯೆಯ ಹಿಂದೂ ಬಾಂಧವರು ಹಾಗೂ ಮುಸ್ಲಿಂ ಬಾಂಧವರು ಭಾಗಿಯಾಗಿ ಹಬ್ಬದ ಆಚರಣೆಯಲ್ಲಿ ಕೈಗೊಳ್ಳಬೇಕಾ ನಿಯಮಗಳನ್ನು ತಿಳಿದುಕೊಂಡರು.
