ಕಣ್ಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್ ಹಸ್ತಾಂತರಿಸಿದ ಅಂಜಳಿಗೆ ಮಂಜುನಾಥ :
ಆಲೂರ್ ತಾಲೂಕು ಕಣತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ಲಕ್ಷ ವೆಚ್ಚದಲ್ಲಿ ಅಪರ್ಣ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯನ್ನು ಅಂಜಳಿ ಗೆ ಕಾಲಿಂಗಪ್ಪ ವೆಲ್ಫೇರ್ ಅಸೋಸಿಯೇಷನ್ ಸಂಸ್ಥಾಪಕರಾದ ಹಂಜಳಿಗೆ ಮಂಜುನಾಥ್ ಅವರು ಈ ದಿನ ಶಾಲಾಡಳಿತಕ್ಕೆ ಹಸ್ತಾಂತರಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ “ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಗ್ರಾಮೀಣ ಭಾಗದ ಮಕ್ಕಳು ಮೊದಲನೇ ತರಗತಿಯಿಂದಲೇ ಮಾಹಿತಿ ತಂತ್ರಜ್ಞಾನದ ಅವಶ್ಯಕತೆ ಬಹು ಮುಖ್ಯ ಅದಕ್ಕಾಗಿ ತಾವು 2014 ರಿಂದಲೇ ಸ್ಮಾರ್ಟ್ ಕ್ಲಾಸ್ ಗಳನ್ನು ಪ್ರತಿ ವರ್ಷವೂ ಪ್ರಾರಂಭಿಸುತ್ತಾ ಬಂದಿದ್ದೇವೆ ಅದರಂತೆ ಈ ವರ್ಷ ಬೈರಾಪುರ ಶಾಲೆಯಲ್ಲಿ ಮಂಗಳವಾರ 2 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಮಾಡಿಕೊಟ್ಟಿರುತ್ತೇವೆ ಎಂದು ಹೇಳಿದರು. ಅವರು ಮಾತನಾಡುತ್ತಾ ಈಗಾಗಲೇ ಕಳೆದ ಹತ್ತು ವರ್ಷಗಳಿಂದ ತಮ್ಮ ಹುಟ್ಟೂರಾದ ಅಂಜಲಿಗೆ, ಕಲ್ಲಾರೆ, ಕಾಗನೂರು, ಮುತ್ತಿಗೆ, ಮಗ್ಗೆ, ಚಿನ್ನಹಳ್ಳಿ ಜೋಡಿಹನ್ನೇನಹಳ್ಳಿ ಬಲ್ಲೂರು , ಕ್ಯಾತನಹಳ್ಳಿ ಕಾಲೋನಿ , ಟೀ ಗುಡ್ಡೇನಹಳ್ಳಿ, ಕದಾಳು, ಹೊಸೂರು, ಬೈರಾಪುರ ಹಾಗೂ ಕಣತೂರು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ಪ್ರಾರಂಭಿಸಿದ್ದೇವೆ. ಇದರ ಉಪಯೋಗವನ್ನು ಸುಮಾರು ಸಾವಿರಕ್ಕಿಂತ ಹೆಚ್ಚು ಮಕ್ಕಳು ಮೊದಲನೇ ತರಗತಿಯಿಂದಲೇ ಮಾಹಿತಿ ತಂತ್ರಜ್ಞಾನದ ಬೇಸಿಕ್ ಕೋರ್ಸ್ ಅನ್ನು ಅಭ್ಯಾಸ ಮಾಡುತ್ತಿದ್ದಾರೆ ಜೊತೆಗೆ ಆಯಾಯ ಶಾಲೆಗಳ ಶಿಕ್ಷಕರು ಶಿಕ್ಷಕಿಯರು ಕೂಡ ಪ್ರೊಜೆಕ್ಟರ್ ಮೂಲಕ ಡಿಜಿಟಲ್ ಎಜುಕೇಶನ್ ಬೋಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ತಾಲೂಕು ಶಿಕ್ಷಕರ ಶಿಕ್ಷಣಾಧಿಕಾರದ ಕೃಷ್ಣೆಗೌಡರು ಮಾತನಾಡುತ್ತಾ “ಮಂಜುನಾಥ್ ಅವರ ಕಾಳಜಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಉಳಿಸುವ ಹಾಗೂ ಬೆಳೆಸುವ ಹೋರಾಟ ತುಂಬಾ ಅಭಿನಂದನೆ, ಅವರು ನೀಡುವ ಅತ್ಯುತ್ತಮ ಗುಣಮಟ್ಟದ ನೋಟ್ ಪುಸ್ತಕಗಳು, ಬ್ಯಾಗುಗಳು ಕಳೆದ 13 ವರ್ಷಗಳಿಂದ ನಮ್ಮ ತಾಲೂಕಿನ ಎಲ್ಲಾ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಪಯೋಗವಾಗಿದೆ.ಅದರ ಜೊತೆಗೆ ಈ ರೀತಿಯ ಸ್ಮಾರ್ಟ್ ಕ್ಲಾಸ್ ಗಳು ವಿದ್ಯಾರ್ಥಿಗಳ ಕೌಶಲ್ಯತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು”.
ಈ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಹಾಸನ ಜಿಲ್ಲಾ ಸಾಹಿತ್ಯಪರಿಷತ್ನ ಮಾಜಿ ಅಧ್ಯಕ್ಷರಾದ ರವಿ ನಾಕಲಗೂಡು ಮಾತನಾಡುತ್ತಾ “ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಈ ರೀತಿಯ ಅತ್ಯಾಧುನಿಕ ತಾಂತ್ರಿಕ ಮಟ್ಟದ ಕಲಿಕೆಗೆ ಅವಕಾಶ ಮಾಡಿಕೊಡುತ್ತಿರುವ ಮಂಜುನಾಥ್ ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸಿದರು. ಜೊತೆಗೆ ತಮ್ಮ ಶಾಲೆಯ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ನಾನು ಈ ಶಾಲೆಗೆ ಈಗಿರುವ ಸಭಾಂಗಣದ ಆವರಣಕ್ಕೆ ಇಂಟರ್ಲಾಕ್ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆಂದು ವಾಗ್ದಾನ ಮಾಡಿದರು.
ಈ ಸಮಾರಂಭದಲ್ಲಿ ಸ್ಥಳೀಯರಾದ ನಟರಾಜ ನಾಕಲುಗೋಡು, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಪೃಥ್ವಿ, ಎಸ್ ಡಿಎಂ ಸಿ ಅಧ್ಯಕ್ಷರಾದ ರಘು, ಶಾಲಾ ಮುಖ್ಯ ಶಿಕ್ಷಕಿರಾದ ಚಂದ್ರಮ್ಮ ಊರಿನ ಎಲ್ಲಾ ಪ್ರಮುಖರು, ಪೋಷಕರು,ಶಿಕ್ಷಕ ಶಿಕ್ಷೆಗೆಯರು, ಅಕ್ಷರ ದಾಸೋಹದ ಸಿದ್ದೇಶ್, ತಾಲೂಕಿನ ಶಿಕ್ಷಣ ಅದೇ ತರಗಳ ಸಿಬ್ಬಂದಿ ವರ್ಗ ಹಾಜರಿದ್ದರು.
