ಪೊಲೀಸ್ ಇಲಾಖೆಯಿಂದ ಮನೆ ಮನೆ ಭೇಟಿ ಜಾಗೃತಿ ಕಾರ್ಯಕ್ರಮ.
ಆಲೂರು: ತಾಲ್ಲೂಕಿನ ಪಾಳ್ಯ ಹೋಬಳಿಯ ಪಾಳ್ಯ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಪೊಲೀಸ್ ನಿರೀಕ್ಷಕರಾದ ಮೋಹನ್ ರೆಡ್ಡಿ ಅವರು ಚಾಲನೆ ನೀಡಿದರು ನಂತರ ಮನೆ ಮನೆಗೆ ಬೇಟಿ ನೀಡಿ ಸಾರ್ವಜನಿಕರಿಗೆ ಜಾಗೃತಿ ಅಭಿಯಾನವನ್ನು ಮಾಡಿದ್ದೇವೆ ಎಂದು ತಿಳಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪೊಲೀಸ್ ಇಲಾಖೆಯಿಂದ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆರಂಭಿಸಿದೆ. ಈ ಕಾರ್ಯಕ್ರಮದ ಅಡಿಯಲ್ಲಿ, ಪೊಲೀಸರು ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸುತ್ತಾರೆ.ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಬೆಳೆಸುವುದು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವುದು.
ಕಾನೂನು ಅರಿವು ಮೂಡಿಸುವುದು,ಜನರ ಮನೆ ಬಾಗಿಲಿಗೆ ಬಂದು ಕಾನೂನು ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವುದು.
ಸಮಸ್ಯೆಗಳ ಪರಿಹಾರ,ಸಾರ್ವಜನಿಕರ ದೂರುಗಳನ್ನು ಆಲಿಸಿ,ಅವುಗಳನ್ನು ಪರಿಹರಿಸಲು ಪ್ರಯತ್ನಿಸುವುದು. ಅಪರಾಧ ತಡೆಗಟ್ಟುವಿಕೆ,ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಮತ್ತು ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಸಹಾಯ ಮಾಡುವುದು.
ಸಹಭಾಗಿತ್ವ ಹೆಚ್ಚಿಸುವುದು:ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಿ, ಪೊಲೀಸ್ ಇಲಾಖೆಯನ್ನು ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡುವುದು.
ಪ್ರತಿ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಬೀಟ್ ಮತ್ತು ಸಬ್-ಬೀಟ್ಗಳಾಗಿ ವಿಂಗಡಿಸಲಾಗಿದೆ.
ಪ್ರತಿ ಸಬ್-ಬೀಟ್ಗೆ 40-50 ಮನೆಗಳ ಒಂದು ಗುಂಪನ್ನು ರಚಿಸಲಾಗಿದೆ.
ಪ್ರತಿ ಗುಂಪಿಗೆ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪೊಲೀಸ್ ಸಿಬ್ಬಂದಿಗಳು ಪ್ರತಿ ಮನೆಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಾರೆ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ.ಪ.ಜಾತಿ ಮತ್ತು ದೌರ್ಜನ್ಯ ಕಾಯ್ದೆ,ಬಾಲ್ಯ ವಿವಾಹ ತಡೆ ಕಾಯ್ದೆ.ಪೋಕ್ಸೋ ಕಾಯ್ದೆ,ರಸ್ತೆ ಸುರಕ್ಷತಾ ಜಾಗೃತಿ,
ಮಹಿಳಾ ಪೊಲೀಸ್ ಸಿಬ್ಬಂದಿಗಳು ಮಹಿಳೆಯರ ಸಮಸ್ಯೆಗಳನ್ನು ಆಲಿಸಲು ಲಭ್ಯವಿರುತ್ತಾರೆ.
ಕೌಟುಂಬಿಕ ದೌರ್ಜನ್ಯ,ಡ್ರಗ್ಸ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಹಾಗೂ ಯಾವುದೇ ಸಂಧರ್ಭದಲ್ಲಿ ಪೊಲೀಸ್ ತುರ್ತುವಾಹನ 112ಕ್ಕೆ ಕರೆಮಾಡುವಂತೆ. ಈ ಕಾರ್ಯಕ್ರಮವು ಸಾರ್ವಜನಿಕರಲ್ಲಿ ಸುರಕ್ಷತಾ ಭಾವನೆಯನ್ನು ಮೂಡಿಸುತ್ತದೆ ಮತ್ತು ಕಾನೂನು ವ್ಯವಸ್ಥೆಯ ಬಗ್ಗೆ ನಂಬಿಕೆ ಹೆಚ್ಚಿಸುವಂತಹ ಕೆಲಸ ಮಾಡುತ್ತಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಪಿ.ಎಸ್.ಐ ಪ್ರವೀಣ್ ಕುಮಾರ್.ಎ.ಎಸ್.ಐ ಚಂದ್ರಶೇಖರ್.ಪಾಳ್ಯ ಬೀಟ್ ಸಿಬ್ಬಂದಿ ಹಾಗೂ ಹೆಚ್.ಸಿ ಯೊಗೇಶ್.ಮುಖಂಡರುಗಳಾದ ಕೆ.ಎಸ್ ಮಂಜೇಗೌಡ.ಪಿ.ಎಲ್ ನಿಂಗರಾಜು.ಪ್ರಕಾಶ್.ಭರಣ್.ಹಾಗೂ ವಿಧ್ಯಾರ್ಥಿಗಳು.ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
