ಆಲೂರು: ಗಿಡ ಗಳನ್ನು ನೆಡುವುದು ಎಲ್ಲಾ ನಾಗರಿಕರ ಜವಾಬ್ದಾರಿ ಎಂದು ಸಿವಿಲ್ ಜಡ್ಜ್ ಮತ್ತು ಜೆಎಂ ಎಫ್ ಸಿ ನ್ಯಾಯಾಧೀಶೆ ಸ್ನೇಹ ಎಂ.ತಿಳಿಸಿದರು.
ತಾಲೂಕಿನ ಜೆಎಂ ಸಿ ಕೋರ್ಟ್ ಆವರಣ ದಲ್ಲಿ ವಕೀಲರ ಸಂಘ ಹಾಗೂ ಲಯನ್ಸ್ ಕ್ಲಬ್
ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಗಿಡ ನೆಟ್ಟು ಮಾತನಾಡಿದ ಅವರು ಪರಿಸರ ಬಹಳ ಮುಖ್ಯ ಪರಿಸರ ನಮ್ಮ ವಿರುದ್ಧ ಕೋಪ ಮಾಡಿಕೊಂಡರೆ ಯಾರಿಗೂ ಉಳಿಗಾಲವಿಲ್ಲ ನಾವು ಪರಿಸರ ಕಾಪಾಡಿಕೊಂಡರೆ ನಮ್ಮ ಮುಂದಿನ ಪೀಳಿಗೆ ಚೆನ್ನಾಗಿರುತ್ತದೆ ಎಂದ ಅವರು ಸೆಪ್ಟೆಂಬರ್ ತಿಂಗಳಲ್ಲಿ ಲೋಕ ಅದಾಲತ್ ಇದ್ದು ಆಸಕ್ತರು ರಾಜಿ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು ಈ ರೀತಿ ಮಾಡಿಕೊಂಡರೆ ಪ್ರಕರಣಗಳನ್ನು ಕಡಿಮೆ ಮಾಡಿಕೊಳ್ಳಬಹುದೆಂದರು.
ವಕೀಲ ಹಾಗು ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜೇಗೌಡ ಮಾತನಾಡಿ ಗಿಡಗಳನ್ನು ಹೆಚ್ಚು ಹೆಚ್ಚು ನೆಡುವುದರಿಂದ ಪರಿಸರ ಕಾಪಾಡಲು ಅನುಕೂಲವಾಗುತ್ತದೆ ಗಿಡಗಳನ್ನು ಬೆಳೆಸಿ ಉಳಿಸಿದರೆ ಪ್ರಕೃತಿ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುತ್ತದೆ. ಲಯನ್ಸ್ ಸಂಸ್ಥೆ ಕಳೆದ 17 ವರ್ಷಗಳಿಂದ ಅನೇಕ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ ತಾಲೂಕಿನಲ್ಲಿ ಕಾಡಾನೆಗಳ ಸಮಸ್ಯೆ ವಿಪರೀತವಾಗಿದೆ. ಆನೆಗಳು ಸೂಕ್ತ ಆಹಾರ ಸಿಗದ ಕಾರಣ ಕಾಡು ಬಿಟ್ಟು ಊರು ಸೇರುತ್ತಿವೆ ಅರಣ್ಯ ಇಲಾಖೆಯವರು ಈ ಬಗ್ಗೆ ಗಮನಹರಿಸಿ ಅರಣ್ಯ ಪ್ರದೇಶದಲ್ಲಿ ಹಣ್ಣು ಹಂಪಲು ಗಿಡಗಳನ್ನು ಬೆಳೆಸಿದರೆ ಪ್ರಾಣಿ ಪಕ್ಷಿಗಳಿಗೂ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನ್ಯಾಯಾಲಯದ ಶಿರಸ್ತೆದಾರ ನಾಗರಾಜ್, ವಕೀಲ ಆರ್ ಬಿ ಸುರೇಶ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಶಾಂತಕುಮಾರ್, ಸದಸ್ಯರಾದ ನಟರಾಜ್, ರಘು ಪಾಳ್ಯ. ಪ್ರವೀಣ್. ಆನಂದ್. ರೇಣುಕಾ ಪ್ರಸಾದ್ ಗಿರೀಶ್ ವಿ.ವಿ.ಮುಂತಾದವರು ಹಾಜರಿದ್ದರು.
