ಆಲೂರು.ತಾಲೂಕಿನ ಮಗ್ಗೆ ಪಂಚಾಯಿತಿಯ ಚೆಸ್ಕಾಂ ಇಲಾಖೆ ಕಚೇರಿಯ ಬಳಿ ಹೊಸಕೋಟೆ ಹೋಬಳಿಯ ಸುತ್ತಮುತ್ತಲಿನ ರೈತರು ಪ್ರತಿಭಟನೆ ಮಾಡಿದರು.
ಕಳೆದ ನಾಲ್ಕು ದಿನಗಳಿಂದ ಹೊಸಕೋಟೆ ಹೋಬಳಿಯ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ತುಂಬಾ ಪರದಾಡುತ್ತಿದ್ದರು ಇದನ್ನು ಮನಗಂಡ ಹೊಸಕೋಟೆ ಹೋಬಳಿಯ ರೈತ ಸಂಘ ಮಗ್ಗೆ ಗ್ರಾಮದಲ್ಲಿರುವ ಚಸ್ಕಾಂ ಇಲಾಖೆಯ ಅಧಿಕಾರಿಯಾದ ಜೆ ಇ ಅನ್ನು ಕೇಳಲು ಹೋದರೆ ತುಂಬಾ ಉಡಾಫೆಯಿಂದ ವರ್ತಿಸಿ ರೈತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾತನಾಡಿದಲ್ಲದೆ ರೈತರಿಗೆ ಹಾಗೂ ಸಾರ್ವಜನಿಕರು ಯಾವುದೇ ವಿದ್ಯುತ್ ಸಂಪರ್ಕ ಮಾಡದೆ ಉಡಾಫೆಯಿಂದ ವರ್ತನೆ ಮಾಡುತ್ತಾನೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಯಣ್ಣ ಐದುರು ಆರೋಪ ಮಾಡಿ ಪ್ರತಿಭಟನೆ ಮಾಡಿದರು.
ನಂತರ ಮಾತನಾಡಿದ ಅವರು ಕಳೆದ ನಾಲ್ಕು ದಿನಗಳಿಂದ ನಮ್ಮ ಸುತ್ತಮುತ್ತಲ ಗ್ರಾಮದಲ್ಲಿ ವಿದ್ಯುತ್ ಶಕ್ತಿ ಇಲ್ಲದೆ ಪರದಾಡುತ್ತಿದ್ದಾರೆ.ಹೊಸಕೋಟೆ ಹೋಬಳಿಗೆ ಕೇವಲ ಎರಡು ಲೈನ್ ಮೆನ್ ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ನಮಗೆ ಹೆಚ್ಚಿನ ಸಿಬ್ಬಂದಿಯನ್ನು ನೀಡಬೇಕು. ಹಾಗೂ ಶೀಘ್ರವೇ ಈ ಅಧಿಕಾರಿಯನ್ನು ಅಮಾನತು ಪಡಿಸಿ ವರ್ಗಾವಣೆ ಮಾಡಬೇಕೆಂದು ಎಲ್ಲರೂ ರೈತರು ಪ್ರತಿಭಟನೆ ಮಾಡುತ್ತಿದ್ದೇವೆ. ಈತನನ್ನು ಅಮಾನತು ಮಾಡಿ ವರ್ಗಾವಣೆ ಮಾಡದೇ ಹೋದರೆ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಎಂದು ಮಾತನಾಡಿದರು.
ಈ ಪ್ರತಿಭಟನೆ ಹಲವಾರು ನೂರಾರು ರೈತರು ಸಾರ್ವಜನಿಕರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಇನ್ನಿತರ ಇದ್ದರು.
