ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು ಕಂಪ್ಲೇಂಟ್ ನಂಬರ್ 307ಗೆ ದೂರವಾಣಿ ಮುಖಂತರ ಶಾಂತಪುರ ವಿರೂಪಾಕ್ಷ ರವರಿಗೆ ಕರೆ ಮಾಡಿ bfo ಮತ್ತು ಸಿಬ್ಬಂದಿಯವರನ್ನು ಸ್ಥಳಕ್ಕೆ ಕಳುಹಿಸಿ ಮನೆ ಹತ್ತಿರ ಬಂದಿದ್ದ ಕಾಡನೆಯನ್ನು ಕಾಫಿ ತೋಟಕ್ಕೆ ಓಡಿಸಲಾಯಿತು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ರಾಜಯ್ಯರವರ ಮನೆಗೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಧೈರ್ಯ ಹೇಳಿ ಬಾಳೆ ಮತ್ತು ಕಾಫಿ ಗಿಡಗಳನ್ನು ಹಾನಿ ಮಾಡಿರುವ ಸ್ಥಳವನ್ನು ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಲಾಗುವುದೆಂದು ತಿಳಿಸಿದರು.
ಈ ಭಾಗದಲ್ಲಿ ಹೆಚ್ಚು ಗಾಳಿ ಮಳೆ ಇರುವುದರಿಂದ ರಾತ್ರಿ ಮತ್ತು ಬೆಳಗ್ಗೆ ಸಮಯದಲ್ಲಿ ರೈತರು, ಸಾರ್ವಜನಿಕರು, ವಾಹನ ಸವಾರರು ಮತ್ತು ವಿದ್ಯಾರ್ಥಿಗಳಿಗೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದರು. ಮತ್ತು ಪ್ರಸ್ತುತ ಇಬ್ಬಡಿ, ಶಾಂತಪುರದಲ್ಲಿ ಇರುವ ಕಾಡಾನೆ ಸ್ಥಳಕ್ಕೆ ನಾಲ್ಕು ಜನ ಆರ್ ಆರ್ ಟಿ ಸಿಬ್ಬಂದಿಯನ್ನು ನಿಯೋಜಿಸಿದರು


