ಸಕಲೇಶಪುರ ತಾಲೂಕು ಅರೆಕೆರೆ ಶಾಂತಪುರ ಗ್ರಾಮದಲ್ಲಿರುವ ರಾಜಯ್ಯನವರ ತೋಟದ ಮನೆಯ ಬಳಿ ಒಂಟಿ ಆನೆಯೊಂದು ಮನೆಯ ಸುತ್ತ ಸುತ್ತಾಟ ಮಾಡಿ ಮನೆಯವರನ್ನು ಭೀತಿಗೊಳಿಸಿದ ಪ್ರಕರಣ ವರದಿಯಾಗಿದೆ.
ಈ ತೋಟದ ಮನೆ ಇಲ್ಲಿ ತಂದೆ ತಾಯಿ ಹಾಗೂ ಹಾಗೂ ಮಗ ವಾಸವಾಗಿದ್ದಾರೆ 27/07/2025 ಭಾನುವಾರ ರಾತ್ರಿ 9.00 ಗಂಟೆ ಸುಮಾರಿಗೆ ಮನೆಯ ಮುಂದೆ ಒಂಟಿ ಕಾಡನೆ ಬಂದು ನಿಂತಿದೆ.
ಮನೆಯಲ್ಲಿ ಪತಿ ಪತ್ನಿ ಇಬ್ಬರೇ ಇದದ್ದು ಮಗ ಸ್ನೇಹಿತರ ಮನೆಗೆ ಹೋಗಿದ್ದಾನೆ. ಆನೆ ಮನೆ ಎದುರುಬಂದು ನಿಂತಿದ್ದು ಅಲ್ಲಿಂದ ಕದಲಲೇ ಇಲ್ಲ.
ಇಂತಹ ಪರಿಸ್ಥಿತಿ ಯಲ್ಲಿ ಅರಣ್ಯ ಇಲಾಖೆಗೆ ಕರೆ ಮಾಡಿದರೆ ಕನಿಷ್ಠ ಮಾಡಲು ಕೂಡ ಯಾರು ಇಲ್ಲ ಎಂದು ಆ ಮನೆಯವರು ತಿಳಿಸಿದ್ದಾರೆ.
ಒಬ್ಬರೇ ಒಬ್ಬ ಮನೆಯಿಂದ ಆಚೆ ಬಂದಿದ್ದರೆ ಕತೆ ಏನಾಗಬೇಕು ರಾತ್ರಿ ಪೂರ್ತಿ ಹೇಗೆ ಕಳೆದಿದ್ದಾರೆ cctv ಇಂದ ಆನೆಯ ಚಲನವಲನೆಯನ್ನು ಗಮನಿಸಿ ಮಗ ತಂದೆ ತಾಯಿಗೆ ಮಾಹಿತಿ ನೀಡುತ್ತಾ ಅವರಿಗೆ ಹೊರಗೆ ಬರದಂತೆ ಎಚ್ಚರಿಕೆ ನೀಡಿದ್ದಾನೆ.
ಆನೆಗಳಿಂದ ಇಂತಹ ಪರಿಸ್ಥಿತಿ ಮಲೆನಾಡಿನಲ್ಲಿ ಒದಗಿದೆ.ಅರಣ್ಯ ಸಚಿವರು ಹಾಗೂ ಸರ್ಕಾರ ಈ ಬಗ್ಗೆ ಕ್ರಮ ಕೈ ಗೊಳ್ಳಬೇಕು.
ಸರಕಾರ ನೀಡುವ ಪುಡಿ ಪರಿಹಾರ ಹಣಕ್ಕೆ ಯಾರು ಸಾಯಲು ಸಿದ್ದರಿಲ್ಲ ಒಂಟಿ ಮನೆಗಳಿಗೆ ಕಳ್ಳರಿಂದ ಒಂದುಕಡೆ ಭಯವಾದರೆ ಇನ್ನೊಂದು ಕಡೆ ಆನೆಗಳಿಂದ ಮಲೆನಾಡಿನ ಜನರಿಗೆ ಇದು ಒಂದು ಶಾಪ ಎಂದು ಆ ಮನೆಯವರು ತಿಳಿಸಿದ್ದಾರೆ
