ಸಕಲೇಶಪುರ ವಲಯ ಸುಳ್ಳಕ್ಕಿ ಮೇಘಲಕೆರೆ ಗ್ರಾಮದ ಮಂಜುನಾಥ್ ಎಂಬುವರ ಮನೆಯ ಹತ್ತಿರ ರಾತ್ರಿ ಒಂಟಿ ಕಾಡಾನೆ ಬಂದು ತೆಂಗಿನ ಮರವನ್ನು ಹಾನಿ ಮಾಡಿರುವುದಾಗಿ ತಿಳಿದು ಬಂದಿದೆ.
ಪ್ರತಿ ನಿತ್ಯ ರೈತರ ಗೋಳು ಹೆಚ್ಚುತ್ತಲೇ ಸಾಗುತ್ತಿದೆ. ವರ್ಷಗಳು ಕಳೆದಂತೆ ಆನೆಗಳ ಸಂಖ್ಯೆಯು ಹೆಚ್ಚುತ್ತಿದೆ.
ಹೀಗಾಗಿ ಸಕಲೇಶಪುರ ಸೇರಿದಂತೆ ಮಲೆನಾಡಿನ ರೈತರ ಪರಿಸ್ಥಿತಿ ಹದ ಗೆಡುತ್ತಲೇ ಸಾಗುತ್ತಿದೆ.
ಯಾರ ಜೀವಕ್ಕೂ ಬೆಲೆ ಇಲ್ಲದಂತೆ ಆಗಿದೆ. ಆನೆ ಹೋಗೋ ಹಾದಿಯಲ್ಲಿ ರೈತರು ತೋಟ ಮಾಡಿದ್ದರೋ ಅಥವಾ ತೋಟ ಮಾಡಿದಲ್ಲಿ ಆನೆ ನುಗ್ಗುತ್ತಿದೆಯೋ ಎಂಬುದು ಯಕ್ಷ ಪ್ರಶ್ನೆ ಆಗಿದೆ.
ಸಕಲೇಶಪುರ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾಗೂ ಸ್ಥಳವನ್ನು ಪರಿಶೀಲನೆ ಮಾಡಿ ಸೂಕ್ತ ಪರಿಹಾರ ಕೊಡುವುದಾಗಿ ತಿಳಿಸಿದರು.
ಶಾಲೆಗಳಿಗೆ ಹೋಗೋ ಮಕ್ಕಳು ಕೆಲಸಕ್ಕೆ ಹೋಗುವ ಕಾರ್ಮಿಕರು ಉದ್ಯೋಗಸ್ಥರು, ಮಹಿಳೆಯರು ಯಾರಿಗೂ ರಕ್ಷಣೆ ಇಲ್ಲದ ಸ್ಥಿತಿ ಮಲೆನಾಡಿನಲ್ಲಿದೆ
