ವರದಿ ರಾಣಿ ಪ್ರಸನ್ನ
ಸಕಲೇಶಪುರದ ಕಾಡುಮನೆಯ ಮುತ್ತಯ್ಯ ಸ್ಮಾರಕ ಭವನದಲ್ಲಿ ಮೂರ್ಕಣ್ಣು ಗುಡ್ಡ ಅಧಿಸೂಚಿತ ಸೆಕ್ಷನ್ 4 ಅರಣ್ಯ ಪ್ರದೇಶವೆಂದು ಭಾದಿತರಾದ ಕಾಡುಮನೆ, ಕ್ಯಾಮನಹಳ್ಳಿ, ಜಂಬರಡಿ, ಅಚ್ಚನಹಳ್ಳಿ, ಅಗನಿ, ನಡಹಳ್ಳಿ, ಮಕ್ಕಿಹಳ್ಳಿ, ಮಾದಾಪುರ ಗ್ರಾಮಸ್ಥರುಗಳಿಗೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ದೌರ್ಜನ್ಯ ಹಾಗೂ ಮಾನಸಿಕ ಕಿರುಕುಳವನ್ನು ವಿರೋಧಿಸಿ ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ರವರ ಅಧ್ಯಕ್ಷತೆಯಲ್ಲಿ ಇಂದು ನಡೆಸಲಾಯಿತು.
ಸಭೆಯಲ್ಲಿ ಸೆಕ್ಷನ್ 4 ಪ್ರದೇಶಗಳಲ್ಲಿರುವ ಗ್ರಾಮಸ್ಥರ ಕುಂದು ಕೊರತೆಗಳು ಹಾಗೂ ತೊಂದರೆಗಳ ಕುರಿತು ಚರ್ಚಿಸಿ, ಗ್ರಾಮಸ್ಥರು ಎದೆಗುಂದದೆ ಹೋರಾಡಬೇಕು, ರೈತರು ಹಾಗೂ ಗ್ರಾಮಸ್ಥರೊಂದಿಗೆ ಸದಾ ಇರುವುದಾಗಿ ಭರವಸೆ ನೀಡಿದರು.
ಈ ಕುರಿತು ಅರಣ್ಯ ಇಲಾಖೆ ಸಚಿವರ ಜೊತೆ ಚರ್ಚಿಸುವುದಾಗಿ ಮತ್ತು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯಲ್ಲಿ ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.


