ಆಲೂರು : ತಾಲೂಕು ಛಲವಾದಿ ಮಹಾ ಸಭಾದ ವತಿಯಿಂದ ಛಲವಾದಿ ಮುಖಂಡ, ಜಿಲ್ಲಾ ಕಾಂಗ್ರೆಸ್ ನಾಯಕ , ಸಕಲೇಶಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುರುಳಿ ಮೋಹನ್ ರವರ ಹುಟ್ಟುಹಬ್ಬದ ಅಂಗವಾಗಿ ಜು 22 ರ ಮಂಗಳವಾರ ” ಉಚಿತ ಆರೋಗ್ಯ ತಪಾಸಣಾ ಶಿಬಿರ ” ವನ್ನು ಪಟ್ಟಣದ ಡಾ ಬಿ ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಛಲವಾದಿ ಮಹಾ ಸಭಾದ ಅಧ್ಯಕ್ಷ ಎಚ್ ಎಂ ಲೋಹಿತ್ ಕುಮಾರ್ ತಿಳಿಸಿದರು.
ರಾಜ್ಯ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷೆ ವಾಣಿ ಶಿವರಾಂ, ಜಿಲ್ಲಾಧ್ಯಕ್ಷ ಲೋಕೇಶ್ ಕುಮಾರ್ ರವರ ನೇತೃತ್ವದಲ್ಲಿ ಛಲವಾದಿ ಮುಖಂಡ, ಕಾಂಗ್ರೆಸ್ ನಾಯಕ ಮುರಳಿ ಮೋಹನ್ ರವರ 42 ನೇ ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಾಸನದ ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನುರಿತ ವೈದ್ಯರುಗಳಿಂದ ತಪಾಸಣೆ ನಡೆಸಲಾಗುವುದು ತಾಲ್ಲೂಕಿನ ಎಲ್ಲಾ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಬಿ ಎಂ ಹರೀಶ್ ಮಾತನಾಡಿ, ಕಾಂಗ್ರೆಸ್ ನಾಯಕ ಮುರುಳಿ ಮೋಹನ್ ರವರ 42 ನೇ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಾಸನದ ಎಂ ಎಂ ಎಂ ಆಸ್ಪತ್ರೆ ಸಹಯೋಗದಲ್ಲಿ ಹೃದಯ ಸಂಬಂದಿ ಕಾಯಿಲೆ, ಮಧುಮೆಹ, ಮೂಳೆ ರೋಗ, ಮೆದುಳು ಮತ್ತು ಬೆನ್ನು ಮೂಳೆ ರೋಗ, ಸ್ತ್ರೀ ರೋಗ, ಗ್ಯಾಸ್ಟ್ರೋ ಎಂಟರಾಲಾಜಿ ರೋಗಗಳ ಬಗ್ಗೆ ನುರಿತ ತಜ್ಞರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದ್ದು ತಾಲೂಕಿನ ಜನತೆ, ಇದರ ಸದುಪಯೋಗ ಪಡೆದು ಕೊಳ್ಳುವಂತೆ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ರಾಜೇಶ್ 9740202010, ಹರೀಶ್ ಬಿ ಎಂ 9964864483 ಹಾಗೂ ಜಯಣ್ಣ 9945505494 ಇವರನ್ನು ಸಂಪರ್ಕಿಸುವಂತೆ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಎಚ್ ಎಂ ಲೋಹಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ ಎಂ ಹರೀಶ್, ದೊಡ್ಡಯ್ಯ, ಯೋಗೇಶ್ ಭರತವಳ್ಳಿ, ಪುಟ್ಟಸ್ವಾಮಿ ಇದ್ದರು.
