ವರದಿ ರಾಣಿ ಪ್ರಸನ್ನ
ಸಕಲೇಶಪುರ ಪತ್ರಕರ್ತ ನವೀನ್ ಶೆಟ್ಟಿ ಅವರ ಮನೆಯ ಬಳಿ ಶಾರ್ಟ್ ಸರ್ಕ್ಯೂಟ್
ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ(4ನೇ ವಾರ್ಡ್ ) ಇಂದು ಬೆಳಗಿನ ಜಾವ ವಿದ್ಯುತ್ ಕಂಬ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿದ್ದು ಸಾರ್ವಜನಿಕರಲ್ಲಿ ಕೆಲಕಾಲ ಆತಂಕವನ್ನುಂಟು ಮಾಡಿತ್ತು.
ಈ ಶಾರ್ಟ್ ಸರ್ಕ್ಯೂಟ್ ನಿಂದ ವಿದ್ಯುತ್ ತಂತಿಗಳು ಹಾಗೂ ಬೋರ್ಡ್ ಸುಟ್ಟು ಕರಕಲಾಗಿದೆ.
ಪಟ್ಟಣದಲ್ಲಿ ಪುರಸಭೆಗೆ ಸೇರಿದ ಎಲ್ಲಾ ವಾರ್ಡ್ಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಬೀದಿ ವಿದ್ಯುತ್ ಅನ್ನು ಆನ್ ಅಂಡ್ ಆಫ್ ಮಾಡುವುದಕ್ಕೆ ಸಂಬಂಧಪಟ್ಟವರು ಕೂಡಲೇ ಸ್ವಿಚ್ಚಳನ್ನು ಅಳವಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಆಗ್ರಹಿಸಿದ್ದಾರೆ.
