ವರದಿ ರಾಣಿ ಪ್ರಸನ್ನ
ಬ್ಲಾಸಮ್ ಶಾಲೆಯಲ್ಲಿ ಒಂದನೆಯ ತರಗತಿಯಲ್ಲಿ ಓದುತ್ತಿದ್ದ ಹುಡುಗನ ಮನೆಯ ಬೆಂಬಲಕ್ಕೆ ನಿಂತ ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ
ಆಲೂರು ತಾಲ್ಲೂಕು ಮಡಬಲು ಗ್ರಾಮದ ದಿವಾಕರ್ ಗೌಡ ಎಂಬ ಬಾಲಕನು ಸಕಲೇಶಪುರ ತಾಲ್ಲೂಕಿನ ಬಾಳುಪೇಟೆಯ ಬ್ಲಾಸಮ್ ಶಾಲೆಯಲ್ಲಿ ಒಂದನೆಯ ತರಗತಿಯಲ್ಲಿ ಓದುತ್ತಿದ್ದು ಈ ಬಾಲಕನಿಗೆ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಹೊಡೆದಿರುವ ಘಟನೆ ನಡೆದಿದ್ದು, ಇದು ಗೊತ್ತಾದ ನಂತರ ಎಲ್ಲಾ ಮಕ್ಕಳ ಹೆತ್ತವರಲ್ಲೂ ಭಯ ಹುಟ್ಟಿಸಿದೆ.
ಸಂಬಂಧಪಟ್ಟ ಶಿಕ್ಷಕಿ ಮತ್ತು ಶಾಲಾ ಮುಖ್ಯಸ್ಥರ ಮೇಲೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳ ರಕ್ಷಣೆಗೆ ಎಲ್ಲಾ ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು. ಈ ಘಟನೆಗೆ ಸಂಬಂಧಿಸಿದಂತೆ ನ್ಯಾಯ ಸಿಗುವಂತೆ ಕ್ರಮವಹಿಸಬೇಕು.
ಇಂತಹ ಪ್ರಕರಣಗಳು ಶಾಲಾ ಮಕ್ಕಳ ಆತ್ಮವಿಶ್ವಾಸವನ್ನು ಕೆಡಿಸುತ್ತವೆ ಹಾಗೂ ಶಾಲೆಯ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತವೆ.ಆದ ಕಾರಣದಿಂದ, ತಕ್ಷಣ ಕ್ರಮ ಕೈಗೊಳ್ಳಲು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಇಲಾಖೆಯವರಿಗೆ ಗಗನ್ ಹಾಡ್ಲಹಳ್ಳಿತಾಲ್ಲೂಕು ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಸಕಲೇಶಪುರ ತಾಲೂಕು ಅವರು ಮನವಿ ಪತ್ರ ನೀಡಿದರು
