ವರದಿ ರಾಣಿ ಪ್ರಸನ್ನ
ಕಸಬಾ ಹೋಬಳಿ ಬೆಳಗಾರರ ಸಂಘದ 2025 -26 ನೇ ಸಾಲಿನ ಕಾರ್ಯಕಾರಿ ಮಂಡಳಿಯ ಪ್ರಥಮ ಮಾಸಿಕ ಸಭೆಯು ಅಧ್ಯಕ್ಷರಾದ ಕೆ ವಿ ಮೇಘರಾಜ್ ರವರ ಅಧ್ಯಕ್ಷತೆಯಲ್ಲಿ ಹೆಚ್ ಡಿ ಪಿ ಎ ಸಭಾಂಗಣದಲ್ಲಿ ನಡೆಯಿತು
* ಸಂಸದೀಯ ಕಾರ್ಯವಿಧಾನಗಳ ಬಗ್ಗೆ ಹಾಗೂ ಸಂಘದ ಕಾರ್ಯವಿಧಾನಗಳ ಬಗ್ಗೆ ಹೆಚ್ ಡಿ ಪಿ ಎ ಪ್ಲಾಂಟೇಶನ್ ರಿಸರ್ಚ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಎಂ ಪ್ರಸನ್ನ ರವರು ಸವಿಸ್ತಾರವಾಗಿ ಸಭೆಗೆ ಮಾಹಿತಿ ಒದಗಿಸಿ ಕೊಟ್ಟರು.
* ಕಾರ್ಯಕಾರಿ ಮಂಡಳಿಯ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಹೆಚ್ ಡಿ ಪಿ ಎ ಮಾಜಿ ಅಧ್ಯಕ್ಷರು ಹಾಗೂ ಕೆಜಿಎಫ್ ನಿರ್ದೇಶಕರಾದ ಶ್ರೀಯುತ ಕೆ ಎನ್ ಸುಬ್ರಮಣ್ಯ ರವರು ಸಭೆಗೆ ಮಾಹಿತಿ ತಿಳಿಸಿದರು.
* ಕಸಬಾ ಹೋಬಳಿ ಬೆಳೆಗಾರರ ಸಂಘದ ನಿಕಟಪೂರ್ವ ಅಧ್ಯಕ್ಷರುಗಳಾದ ಶ್ರೀಯುತ ಆರ್.ಎಂ ಚಂದ್ರಶೇಖರ್ ಮತ್ತು ಶ್ರೀಯುತ ಬಿ.ಡಿ ಪ್ರಸನ್ನ ಕುಮಾರ್ ರವರಿಗೂ ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀಯುತ ಬಿ. ಎಂ.ಮದನ್ ಕುಮಾರ್ ಹಾಗೂ ಶ್ರೀಯುತ ಹೆಚ್.ಆರ್ ಮಹೇಶ್ ರವರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
* ಕಾಫಿ ಮಂಡಳಿಯ ಉಪನಿರ್ದೇಶಕರಾದ ಶ್ರೀಯುತ ಶಕ್ತಿಯವರು ಸಭೆಯಲ್ಲಿ ಉಪಸ್ಥಿತರಿದ್ದು ಕಾಫಿ ಕೊಳೆ ರೋಗದ ಬಗ್ಗೆ ಸಭೆಗೆ ಸಂಕ್ಷಿಪ್ತವಾಗಿ ಮಾಹಿತಿ ತಿಳಿಸಿದರು.
* ಕಸಬಾ ಹೋಬಳಿ ಬೆಳೆಗಾರರ ಸಂಘದ ನೂತನ ನಿರ್ದೇಶಕರುಗಳು ಮತ್ತು ಪಂಚಾಯಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಗುರುತಿಸಲಾಯಿತು ಹಾಗೂ ಅವರುಗಳು ವ್ಯಕ್ತಿ ಪರಿಚಯ ಮಾಡಿಕೊಂಡರು.
* ಸಭೆಯು ಅಚ್ಚುಕಟ್ಟಾಗಿ ನಡೆದು ಕಾಫಿ ಉದ್ಯಮದ ಪ್ರಸ್ತುತ ಸ್ಥಿತಿಗತಿ ಬಗ್ಗೆ ಸಂಕ್ಷಿಪ್ತವಾಗಿ ಸಭೆಯಲ್ಲಿ ಚರ್ಚಿಸಲಾಯಿತು.
ವಂದನೆಗಳು
ಕೆ ವಿ ಮೇಘರಾಜ್ ಅಧ್ಯಕ್ಷರು ಎನ್ ಡಿ ರಾಕೇಶ್ ನಟ್ಟಳ್ಳಿ ಗೌರವ ಕಾರ್ಯದರ್ಶಿ
B M ಮದನ್ ಕುಮಾರ್ ಉಪಾಧ್ಯಕ್ಷರು
ವಿಜಿತ್ ಖಜಾಂಚಿ
ಪುಟ್ಟರಾಜು ಸಹಕಾರ್ಯದರ್ಶಿ

