ವರದಿ ರಾಣಿ ಪ್ರಸನ್ನ
ರೆಸಾರ್ಟ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷರಾದ ಮಸ್ತಾರೆ ಲೋಕೇಶ್ ಅವರ ನೇತೃತ್ವದಲ್ಲಿ ಪ್ಲಾಸ್ಟಿಕ್ ಮುಕ್ತ ವಲಯ ಸೂಚನಾ ಫಲಕ ಅಳವಡಿಕೆ
ಪರಿಸರ ಪ್ರೇಮ ತೋರಿದ ರೆಸಾರ್ಟ್ ಮಾಲೀಕರ ಅಸೋಸಿಯೇಷನ್ .
ಸಕಲೇಶಪುರದ ರೆಸಾರ್ಟ್ ಮಾಲೀಕರ ಅಸೋಸಿಯೇಷನ್ ವತಿಯಿಂದ ಪ್ಲಾಸ್ಟಿಕ್ ಮುಕ್ತ ವಲಯ ಸೂಚನಾ ಫಲಕಗಳನ್ನು ನಿನ್ನೆ ಒಟ್ಟು 6 ಜಾಗಗಳಲ್ಲಿ ನೆಟ್ಟು ತಮ್ಮ ಪರಿಸರ ಪ್ರೇಮವನ್ನು ತೋರಿದರು.
ಬೆಟ್ಟದ ಭೈರವೇಶ್ವರ ದೇವಸ್ಥಾನ, ಮಗಜಹಳ್ಳಿ ಫಾಲ್ಸ್ , ಮಂಜರಾಬಾದ್ ಪೋರ್ಟ್, ಬಿಸ್ಲೆ ವ್ಯೂ ವೀವ್ ಪಾಯಿಂಟ್, ಪಟ್ಲ ಬೆಟ್ಟ , ಮೂಕನಮನೆ ಫಾಲ್ಸ್, ಈ ಸ್ಥಳಗಳಲ್ಲಿ ಪ್ಲಾಸ್ಟಿಕ್ ಮುಕ್ತ ವಲಯ ಸೂಚನಾ ಫಲಕಗಳನ್ನು ಇವರಿಂದಲೇ ಸ್ವತಃ ನೆಡಲಾಗಿದೆ.
ಪ್ರವಾಸಿಗರ ಮಲೆನಾಡ ಸೌಂದರ್ಯವನ್ನು ಸವಿಯಲು ಬಂದವರು ಸುಮ್ಮನೆ ಹೋಗದೆ ಅಲ್ಲಲ್ಲಿ ಜ್ಯೂಸ್, ನೀರು, ಮದ್ಯಪಾನದ ಬಾಟಲಿಗಳನ್ನು ಎಸೆದು ಪರಿಸರ ಹಾಳು ಮಾಡುತ್ತಿದ್ದರು . ಈ ಸೂಚನಾ ಫಲಕದ ಮೂಲಕವಾದರೂ ಎಚ್ಚೆತ್ತುಕೊಳ್ಳಲಿ ಎಂದು ನಿಲ್ಲಿಸಿದ್ದೇವೆ ಎಂದು ತಿಳಿಸಿದರು.
