ಸಕಲೇಶಪುರ ಆರ್ ಟಿ ಓ ಕಚೇರಿಯಲ್ಲಿ ನಡೆದ ಹುಟ್ಟುಹಬ್ಬದ ಆಚರಣೆ ಪ್ರಕರಣ ಹಲವು ತಿರುವುಗಳನ್ನು ಪಡೆದು ಕೊಂಡಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ಮಲೆನಾಡ ರಕ್ಷಣಾ ಸೇನೆ ಇಂದು ಸಚಿವರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆ, ಹಾಸನ ಜಿಲ್ಲಾಧ್ಯಕ್ಷರಾದ ದರ್ಶನ್ ಮಲ್ನಾಡ್
ಸಾಮಾಜಿಕ ಜಾಲತಾಣ ವಕ್ತಾರ ರಾದ ಪವನ್ ಕಾಗಿನಹರೇ ಜಿಲ್ಲಾ ಸಂಚಾಲಕರಾದ ರಾಜೇಶ್ ಗೌಡ ಸಹಕಾರ್ಯದರ್ಶಿಗಳಾದ ಶರತ್ ಶೆಟ್ಟಿ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮನವಿಯ ವಿವರ
ಗೆ :-
ಮಾನ್ಯ ಕೆಎನ್ ರಾಜಣ್ಣ ರವರು
ಸಹಕಾರ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ
ವಿಷಯ :-
ಸಕಲೇಶಪುರ ಎ ಆರ್ ಟಿ ಓ ಕಚೇರಿಯಲ್ಲಿ ದಲ್ಲಾಳಿಯ ಹುಟ್ಟುಹಬ್ಬ ಆಚರಿಸಿರುವ ಅಧಿಕಾರಿಗಳ ಅಮಾನತ್ತು ಮಾಡುವಂತೆ ಕೋರಿ
ಮಾನ್ಯರೆ :-
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಎಆರ್ಟಿಓ ಕಚೇರಿಯಲ್ಲಿ ಕೆಲಸದ ಸಮಯದಲ್ಲಿ ದಲ್ಲಾಳಿ ಮೋಹನ್ ಶೆಟ್ಟಿ ಎಂಬ ವ್ಯಕ್ತಿಯ ಹುಟ್ಟುಹಬ್ಬವನ್ನು ಎ ಆರ್ ಟಿ ಓ ಮಧುರ ಹಾಗೂ ಕಚೇರಿಯ ಇತರೆ ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳು ಸೇರಿ ಸಾರ್ವಜನಿಕ ಕೆಲಸದ ಸಮಯದಲ್ಲಿ ಸಾರ್ವಜನಿಕರಿಗೆ ಅಡಚಣೆ ಮಾಡುವ ಮೂಲಕ ದಲ್ಲಾಳಿ ಮೋಹನ್ ಶೆಟ್ಟಿ ಅವರ ಹುಟ್ಟುಹಬ್ಬ ಅದ್ದೂರಿಯಾಗಿ ಶಾಲು ಹಾರ ತುರಾಯಿ ಹಾಗೂ ಕೇಕ್ ಕತ್ತರಿಸುವ ಮೂಲಕ ಹಾಗೂ ಕಚೇರಿಯ ಒಳಭಾಗದಲ್ಲಿ ಬಿರಿಯಾನಿ ಹಂಚುವ ಮೂಲಕ ಹುಟ್ಟುಹಬ್ಬವನ್ನು ಆಚರಿಸುತ್ತಾರೆ ಈ ಸಂಬಂಧವಾಗಿ ಎಲ್ಲಾ ಪತ್ರಿಕ ಮಾಧ್ಯಮದಲ್ಲಿ ಹಾಗೂ ದೂರದರ್ಶನಗಳಲ್ಲಿ ಸುದ್ದಿ ಈಗಾಗಲೇ ಪ್ರಸಾರವಾಗಿದ್ದು ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳು ಸಹ ನಮ್ಮಲ್ಲಿ ಇರುತ್ತದೆ ಆದ್ದರಿಂದ ತಾವುಗಳು ಈ ಅಧಿಕಾರಿಗಳನ್ನು ತತ್ತಕ್ಷಣ ಅಮಾನತುಗೊಳಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿ ಹಾಗೂ ಜಿಲ್ಲೆಯ ಗೌರವವನ್ನು ಕಾಪಾಡಬೇಕಾಗಿ ತಮ್ಮಲ್ಲಿ ಈ ಮೂಲಕ ಅತ್ಯಂತ ವಿನಯ ಪೂರ್ವ ವಾಗಿ ಕೇಳಿಕೊಳ್ಳುತ್ತಿದ್ದೇವೆ
ಇಂತಿ
ತಮ್ಮ ವಿಶ್ವಾಸಿ
ದರ್ಶನ್ ಮಲೆನಾಡು ರಕ್ಷಣಾ ಸೇನೆ ಹಾಸನ ಜಿಲ್ಲಾ ಅಧ್ಯಕ್ಷರು

