
ಸಕಲೇಶಪುರ ತಾಲ್ಲೂಕು ಉದೇವಾರ ಪಂಚಾಯಿತಿಯ ಕೆಸಗುಲಿ ಗ್ರಾಮದ ವಿದ್ಯಾರ್ಥಿಗಳು, ವೃದ್ಧರು ಹಾಗೂ ಮಹಿಳೆಯರು ಪ್ರತಿದಿನ ಹಾಸನಕ್ಕೆ ಕಾಲೇಜು ಹಾಗೂ ವಿವಿಧ ಉದ್ಯೋಗಗಳ ನಿಮಿತ್ತ ಪ್ರಯಾಣಿಸುತ್ತಿದ್ದಾರೆ. ಆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಸಮ ಎದುರಿಸುವಂತಾಗಿದೆ.ಅಲ್ಲದೆ ಇತ್ತೀಚಿನ ದಿನಗಳಲ್ಲಿ ಸರಿಯಾದ ಬಸ್ ಸಂಪರ್ಕ ಇಲ್ಲದೆ ಈ ರಸ್ತೆಯಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿದ್ದು ಆನೆಯ ಉಪದ್ರವ ಇತ್ಯಾದಿ ಕಾರಣಗಳಿಂದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವೃದ್ಧರಿಗೆ ಈ ಮಾರ್ಗ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ. ಆದ್ದರಿಂದ ಒಂದು ಬಸ್ಸನ್ನು ಬೆಳಿಗ್ಗೆ ಹಾಗೂ ಇನ್ನೊಂದು ಬಸ್ಸನ್ನು ಸಂಜೆ ವೇಳೆಗಳಲ್ಲೂ ಕೆಸಗುಲಿ ಗ್ರಾಮವನ್ನೂ ಸೇರಿಸುವಂತೆ ನಿಯೋಜನೆ ಮಾಡಬೇಕಾಗಿ ಇಂದು ತಾಲೂಕು, ರಕ್ಷಣಾ ವೇದಿಕೆ ಗಗನ್ ಹಾಡ್ಲಹಳ್ಳಿ ನೇತೃತ್ವದಲ್ಲಿ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಉಪಾಧ ಹೆತ್ತೂರು, ತಾಲೂಕು ಪ್ರಧಾನ ಕಾರ್ಯದರ್ಶಿ ಜೈಕುಮಾರ್,ತಾಲೂಕು ರೈತ ಘಟಕದ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್,ಸಂಭ್ರಮ ಹೊಡಚಳ್ಳಿ ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ಹಾಗೂ ಹಾನುಬಾಳು ಹೋಬಳಿಯ ಉಸ್ತುವಾರಿ, ಸುನಿಲ್ ದೇವಲಕೆರೆ ರೈತ ಘಟಕದ ಉಪಾಧ್ಯಕ್ಷರು ನವೀನ್ ತಾಲೂಕು ಘಟಕದ ಕಾರ್ಯದರ್ಶಿ, ಆದರ್ಶ ರೈತ ಘಟಕದ ಹಾನು ಬಾಳು ಹೋಬಳಿ ಅಧ್ಯಕ್ಷರು, ಉದೇವಾರ ಪಂಚಾಯತಿ ಘಟಕದ ಅಧ್ಯಕ್ಷರಾದ ಮಂಜುನಾಥ್ ಇದ್ದರು.
ವರದಿ ರಾಣಿ ಪ್ರಸನ್ನ
