
ಅರಣ್ಯ ಇಲಾಖಾಧಿಕಾರಿಗಳಾದ ಕೃಷ್ಣರವರ ದುರವರ್ತನೆ ತನ್ನ ಇಲಾಖೆಯ ಸಿಬ್ಬಂದಿಗಳೊಂದಿಗೆ ಬಡವರ ಮನೆಯನ್ನು ಜೆ.ಸಿ.ಬಿಯಿಂದ ನೆಲಸಮ.ಯುವ ಕಾಂಗ್ರೆಸ್ ವತಿಯಿಂದ ಹಾಗು ಕೆಡಿಪಿ ಸದಸ್ಯರು ಕೋಮಾರಯ್ಯ ಅವರಿಂದ ಪ್ರತಿಭಟನೆ ಉಪವಿಭಗಾಧಿಕಾರಿಗಳಿಗೆ ಮನವಿ.ಶೋಭರಾಜ್ ರವರು ಕಳೆದ 6 ವರ್ಷಗಳಿಂದಲೂ ಯಸಳೂರು ವ್ಯಾಪ್ತಿಯ ಯಸಳೂರು ಸ.ನಂ 361 ರಲ್ಲಿ 2021-22 ನೇ ಸಾಲಿನಲ್ಲಿ ಡಾ||ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ” ಯಡಿಯಲ್ಲಿ ತನ್ನ ಪತ್ನಿ ಪ್ರಿಯಾ ಡಿ.ಕೆ ರವರ ಹೆಸರಿನಲ್ಲಿ ಸರ್ಕಾರದ ಅನುದಾನ ಪಡೆದು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಅರಣ್ಯ ಇಲಾಖೆಯ ಮರಗಳನ್ನು ಕಡಿದಿದ್ದಾನೆಂದು ನೆಪವೊಡ್ಡಿ ದಿನಾಂಕ: 03-07-2025ರಂದು ಸಂಜೆ ಮನೆಗೆ ಬಂದು ರಕ್ತ ಬರುವಂತೆ ಹೊಡೆದು, ಕರೆದುಕೊಂಡು ಹೋಗಿ ಮುಚ್ಚಳಿಕೆ ಬರೆಸಿವಾಪಾಸ್ಸು ಕಳಿಸಿ, ದಿನಾಂಕ:04-07-2025 ರಂದು ಅರಣ್ಯ ಇಲಾಖಾಧಿಕಾರಿಗಳಾದ ಕೃಷ್ಣರವರು ತನ್ನ ಇಲಾಖೆಯ ಸಿಬ್ಬಂದಿಗಳೊಂದಿಗೆ ಜೆ.ಸಿ.ಬಿ ತೆಗೆದುಕೊಂಡು ಹೋಗಿ ಮನೆಯನ್ನು ನೆಲಸಮಗೊಳಿಸಿರುತ್ತಾರೆ. ಮನೆ ಕೆಡವಿ ” ನಾನು ಸರ್ಕಾರದ ಸಹಾಯಧನ ಪಡೆದು, ಅದಕ್ಕೆ ಕೂಲಿ ಮಾಡಿ, ಸಾಲ ಮಾಡಿ ಹಣ ಕೂಡಿಸಿ ಮಾಡಿದ್ದ ಮನೆಯನ್ನು ಕೆಡವಿ ಸರ್ಕಾರಕ್ಕೆ ಮುಜುಗರ ತಂದಿರುತ್ತಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಿನಾಂಕ: 04-07-2025 ರಂದು ದೂರನ್ನು ಕೂಡ ದಾಖಲು ಮಾಡಿರುತ್ತಾರೆ ಮತ್ತು ಕೇಳಲು ಹೋದ ಮುಖಂಡರ ಮೇಲೂ RFO ರವರು ದಾಖಲಿಸಿರುತ್ತಾರೆ.ಪ್ರಕರಣ ಈ ಎಲ್ಲಾ ಘಟನೆಗಳಿಂದ ಸರ್ಕಾರಕ್ಕೆ ಮುಜುಗರ ತಂದಿದ್ದು, ಸರ್ಕಾರಕ್ಕೆ ಕೆಟ್ಟ ಹೆಸರನ್ನು ತರಬೇಕೆಂಬ ಉದ್ದೇಶದಿಂದಲೇ ದಲಿತರ ಮೇಲೆ ದೌರ್ಜನ್ಯ ವೆಸಗಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.
ವರದಿ ರಾಣಿ ಪ್ರಸನ್ನ
