ಆಲೂರುನಲ್ಲಿ ಒಂದು ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಕೆ ಎಸ್ ಆರ್ ಟಿ ಸಿ ಅಧಿಕಾರಿ ಮೃತ ಪಟ್ಟಿದ್ದರು. ಈ ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಆ ಲಾರಿಯನ್ನು ಪರಿಶೀಲನೆ ಮಾಡಿದಾಗ ಸಿಕ್ಕಿದ್ದು ಅಕ್ಕಿ.
ಹಾಸನ ಜಿಲ್ಲೆ ಆಲೂರು ತಾಲೂಕಿನ ಪೊಲೀಸ್ ಠಾಣೆ ಎದುರು ನಿಂತಿದೆ ಈ ಲಾರಿ
ಮಂಗಳೂರಿನಿಂದ ಬನ್ನೂರಿಗೆ ಈ ಅಕ್ಕಿಯನ್ನು ಸಾಗಿಸುತ್ತಿದ್ದು ಆ ಲಾರಿಯ ಒಳಗಿರುವ ಇರುವುದು ಅಕ್ಕಿ ಅನ್ನ ಭಾಗ್ಯ ಅಕ್ಕಿಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ
ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಪರಿಶೀಲನೆ ನಡೆಸಬೇಕಾಗಿದೆ
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸೋರಿ ಹೋಗುತ್ತಿದೆ ನಿಮ್ಮ ಅನ್ನ ಭಾಗ್ಯ ಯೋಜನೆಯ ಗುರಿ
ಹಗಲು ದರೋಡೆಕೋರರ ಪಾಲಾಗುತ್ತಿದೆ ಅನ್ನಭಾಗ್ಯ ಯೋಜನೆ
ಕಾಳ ಸಂತೆಯಲ್ಲಿ ವ್ಯಾಪಾರವಾಗುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ
ಬಡವರ ಪಾಲಾಗಬೇಕಾದ ಅಕ್ಕಿ ಇಂದು ಕಾಳಸಂತೆ ಕೋರರ ಪಾಲಾಗುತ್ತಿದೆಯೋ ಎಂಬ ಬಗ್ಗೆ ತನಿಖೆ ಆಗಬೇಕಿದೆ
