ವರದಿ :
ನಾಗೇಶ್ ಎಂ ಎಚ್ ಮಾಗೇರಿ
ಸಕಲೇಶಪುರ: ಹಾಸನದ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ ಲತಾ ಕುಮಾರಿ ರವರು ಸಕಲೇಶಪುರ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ
ತಾಲ್ಲೂಕಿನ ಕೃಷಿ ಇಲಾಖಾ ಯೋಜನೆಗಳ ಬಗ್ಗೆ ಅಧಿಕಾರಿಗಳು ಮತ್ತು ರೈತರೊಂದಿಗೆ ಮಾಹಿತಿ ಪಡೆದು ಸಕಲೇಶಪುರ ಕೃಷಿ ಇಲಾಖೆ ಕಛೇರಿಯಲ್ಲಿ ಅಳವಡಿಸಿರುವ ಪಾರದರ್ಶಕ ಕೃಷಿ ಸವಲತ್ತು ಮತ್ತು ಸಹಾಯಧನ ಮಾಹಿತಿ ವಿವರ ಪಡೆದರು. ನಂತರ ಅಲ್ಲಿನ ಕಛೇರಿ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ಭೂಮಿ ತಾಯಿ ಸಂರಕ್ಷಣಾ ಆಂದೋಲನ ಮತ್ತು ನೈಸರ್ಗಿಕ ಕೃಷಿಯ ರಾಷ್ಟ್ರೀಯ ಅಭಿಯಾನ ಕಾರ್ಯಕ್ರಮದ ಮಹತ್ವವನ್ನು ಹಂಚಿಕೊಂಡರು.
ಇದೇ ವೇಳೆ ರೈತರಿಗೆ ಸರ್ಕಾರದ ಸಹಾಯಧನದಡಿ ಭತ್ತ ಕಟ್ಟಾವು ಯಂತ್ರವನ್ನು ರೈತರಿಗೆ ವಿತರಿಸಿ ಮಾತನಾಡಿ, ಭೂಮಿ ತಾಯಿಯ ರಕ್ಷಣೆ ಕೃಷಿಯಲ್ಲಿ ಮಣ್ಣಿನ ಸಂರಕ್ಷಣೆಯಿಂದ ಮಾತ್ರ ಸಾಧ್ಯವಿದೆ. ಆಧುನಿಕ ಕೃಷಿಯಲ್ಲಿ ರಸಗೊಬ್ಬರ, ಪೀಡೆನಾಶಕ ಮತ್ತು ಕಳೆನಾಶಕಗಳ ಬಳಕೆಯಿಂದ ಮಣ್ಣಿನ ಮತ್ತು ನೀರಿನ ಮೇಲೆ ಆಗುವ ತೊಂದರೆಗಳಾಗಿ, ಬೆಳೆಗಳ ಆರೋಗ್ಯ ಮತ್ತು ಆ ಮೂಲಕ ಮನುಷ್ಯನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಾ ಈ ಹಂತದಲ್ಲಿ ಮನುಷ್ಯನನ್ನು ಅನೇಕ ನಿತ್ಯ ಪ್ರಸಂಗಗಳು ಎಚ್ಚರಿಸುತ್ತಿವೆ. ಈ ನಿಟ್ಟಿನಲ್ಲಿ ನಿಸರ್ಗದ ತತ್ವಗಳ ಆಧಾರವಾಗಿ ಪರಿಸರ ಸ್ನೇಹಿ ಕೃಷಿ ಅಳವಡಿಕೆಯಲ್ಲಿ ಇರುವ ವೈಜ್ಞಾನಿಕ ಅಂಶಗಳಾಗಿ ನಿಸರ್ಗ ಮೂಲದಲ್ಲೇ ಲಭ್ಯವಿರುವ ಸೂಕ್ಷ್ಮ ಜೀವಿಗಳ ಬಳಕೆ, ಜೈವಿಕ ಪೀಡಿನಾಶಕಗಳ ಬಳಕೆ, ಇವುಗಳ ಉಪಯೋಗಗಳ ಬಗ್ಗೆ ಸಾಮಾನ್ಯ ರೈತರಿಗೂ ಇರಬೇಕಾದ ಅಂಶಗಳ ಕುರಿತು ಬೆಳಕು ಚೆಲ್ಲಿದರು. ಭೂಮಿ ತಾಯಿ ರಕ್ಷಣೆ ಕುರಿತು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಕೃಷಿ ಸಖಿಯರು ವಿವಿಧ ಘೋಷಣಾ ಫಲಕವನ್ನು ಪ್ರದರ್ಶಿಸಿ ಮಾಹಿತಿ ಪ್ರಚಾರಕ್ಕೆ ಅವಕಾಶವಿತ್ತಂತೆ ಜಿಲ್ಲಾಧಿಕಾರಿಗಳು ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ಇಲಾಖೆ ಯೋಜನೆಗಳನ್ನು ರೈತರೊಂದಿಗೆ ಹಂಚಿಕೊಳ್ಳಲು ಕೃಷಿ ಸಖಿಯರಿಗೆ ಸಂದೇಶ ನೀಡಿದರು. ನಂತರ ಭಾರತದ ಸ್ಪೆಷಾಲಿಟಿ ಕಾಫಿ ಅಧ್ಯಕ್ಷರು ಮತ್ತು ಉದ್ಯಮಿಗಳು ಆಗಿರುವ ಶ್ರೀ ಡಿ ಎಂ ಪೂರ್ಣೇಶ್ ರವರ ಹಾರ್ಲೆ ಕಾಫಿ ಎಸ್ಟೇಟ್ ನಲ್ಲಿ ಕಾಫಿ ಗುಣಮಟ್ಟ ಕಾಪಾಡಲು ಅಳವಡಿಸಿರುವ ಪಲ್ಪಿಂಗ್ ಘಟಕ, ಸರ್ಕಾರದ ಸಹಾಯಧನದಡಿ ನಿರ್ಮಿಸಿರುವ ಸೋಲಾರ್ ಡ್ರೈಯರ್, ಕಾಫಿ ಪ್ರಯೋಗಾಲಯದಲ್ಲಿ ಕೈಗೊಳ್ಳುತ್ತಿರುವ ವಿವಿಧ ಗುಣಮಟ್ಟ ಕಾಫಿ ಉತ್ಪನ್ನ ಮಾದರಿಗಳನ್ನು ಪ್ರಾಕ್ಟಿಕಲ್ ಪ್ರಯೋಗಳನ್ನು ಅಲ್ಲಿಯೇ ಏರ್ಪಡಿಸಿ ನೆರೆದಿದ್ದ ಇತರರ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು.
ಇದೇ ವೇಳೆ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಈ ಕ್ಷೇತ್ರ ಭೇಟಿ ಕಾರ್ಯಕ್ರಮ ಮತ್ತು ರೈತರು ಮತ್ತು ವಿಜ್ಞಾನಿಗಳ ಸಂವಾದದಲ್ಲಿ ಕಾಫಿ ಬೆಳೆಗಾರರು ಮತ್ತು ಮುಖಂಡರಾದ ಹಾನುಬಾಳು ಭಾಸ್ಕರ್, ಅನ್ನಪೂರ್ಣೇಶ್ವರಿ ಪ್ಲಾಂಟೇಷನ್ ಚಂದ್ರೇಗೌಡ (ಎ ಟಿ ಎಂ, ರಾಜು ), ಬೆಳೆಗಾರರಾದ ಅನಿಲ್ ಮತ್ತು ಇತರರೊಂದಿಗೆ ದೋಣಿಗಲ್ ಏಲಕ್ಕಿ ಮತ್ತು ಸಂಬಾರ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ಹರ್ಷ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಶಿವಶಂಕರ್ ರೈತರೊಂದಿಗೆ ವಿಚಾರ ವಿನಿಮಯದಲ್ಲಿ ಭಾಗಿಯಾಗಿದ್ದರು.
ಜಿಲ್ಲಾಧಿಕಾರಿಗಳು ಹಾರ್ಲೆ ತೋಟದಲ್ಲಿ ಬಗೆ ಬಗೆಯ ಕಾಫಿ ಉತ್ಪನ್ನಗಳನ್ನು ವಿವಿಧ ಸಂಶೋಧನೆಗಳ ಮೂಲಕ ಕಂಡುಕೊಂಡು ನಮ್ಮ ಸ್ಥಳೀಯ ಕಾಫಿಗೆ ಇರುವ ಅಂತರರಾಷ್ಟ್ರೀಯ ಬೇಡಿಕೆಯನ್ನು ಪರಿಚಯಿಸುತ್ತಿರುವುದು ಕೇವಲ ಕಾಫಿ ಉತ್ಪಾದನೆ ಮಾಡಿ ಕಾಫಿಯ ಇತರೆ ಮರುಉತ್ಪನ್ನಗಳ ಉತ್ಪಾಧನೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ಯೋಚಿಸದ ಬಹುತೇಕ ಸಾಮಾನ್ಯ ಬೆಳೆಗಾರರಿಗೆ ಇದು ಒಂದು ಕಲಿಕೆಯಾಗಿದೆ ಎಂದು ಶ್ಲಾಘಿಸಿದರು.
ಜಿಲ್ಲಾಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಕೈಗೊಂಡ ವಿವಿಧ ಕಾರ್ಯಕ್ರಮಗಳ ವೇಳೆ ಜಂಟಿ ಕೃಷಿ ನಿರ್ದೇಶಕ ಪಿ.ರಮೇಶ್ ಕುಮಾರ್ ಮಾತನಾಡಿ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನದಡಿ ಜಿಲ್ಲೆಯ ಅಂಕಿ ಅಂಶ ಹೇಳುತ್ತಾ ಪ್ರಸ್ತುತ ವರ್ಷ ಸಕಲೇಶಪುರ ತಾಲ್ಲೂಕಿನ 5 ಹೋಬಳಿಗಳ, 10 ಗ್ರಾಮ ಪಂಚಾಯಿತಿ ವ್ಯಾಪ್ತಿಯ, 20 ಹಳ್ಳಿಗಳಲ್ಲಿ 625 ರೈತರ ತೋಟಗಳಲ್ಲಿ ಈ ಯೋಜನೆಯನ್ನು 2 ವರ್ಷಗಳ ಕಲಾವಧಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ, 2 ವರ್ಷಗಳ ನಂತರ ಯೋಜನೆಯ ಉದ್ದೇಶವನ್ನು ಇತರೆ ರೈತರಿಗೆ ವಿಸ್ತರಿಸಲಾಗುತ್ತದೆ.
ಯೋಜನೆಯಡಿ ನೈಸರ್ಗಿಕ ಕೃಷಿ ಜಮೀನನ್ನು ಮತ್ತು ಸಂಬಂಧಿತ ಉತ್ಪನ್ನಗಳನ್ನು ಸರ್ಟಿಫಿಕೇಶನ್ ಮಾಡಿಸಲು ಕೃಷಿ ಇಲಾಖೆಯ ಪ್ರೋತ್ಸಾಹವಿದೆ ಎಂದು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಕಲೇಶಪುರ
ಸಹಾಯಕ ಕೃಷಿ ನಿರ್ದೇಶಕರಾದ ಪ್ರಕಾಶ್ ಕುಮಾರ್ ಯು ಎಂ ಮಾತನಾಡಿ ಸಕಲೇಶಪುರ ಕೃಷಿ ಇಲಾಖೆಗೆ ಈ ದಿನ ಪ್ರಥಮವಾಗಿ ಜಿಲ್ಲಾಧಿಕಾರಿಗಳು ಕಛೇರಿ ಭೇಟಿ ನೀಡಿ ರೈತರಿಗೆ ಸರ್ಕಾರದ ಸವಲತ್ತು ವಿತರಿಸಿ ಭೂಮಿ ತಾಯಿ ಸಂರಕ್ಷಣಾ ಆಂದೋಲನಕ್ಕೆ ಚಾಲನೆ ನೀಡಿದ್ದು ಸಂತೋಷದ ಸಂದರ್ಭ ಎಂದು ತಿಳಿಸಿ ಸರ್ಕಾರಿ ಕಛೇರಿಯಲ್ಲಿ ರೈತರಿಗೆ ಪಾರದರ್ಶಕತೆಯ ಅಗತ್ಯತೆ ಕುರಿತು ಎಲ್ಲಾ ಕೃಷಿ ಪರಿಕರಗಳ ದಾಸ್ತಾನು ಸ್ವೀಕೃತಿ ಲಭ್ಯತೆ ಧರ ವಿವರ ಮತ್ತು ಅನುದಾನ ವಿವರನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಸಮಾಜಿಕ ಜಾಲತಾಣದಲ್ಲೂ ಫಲಾನುಭವಿ ವಿವರ ಮತ್ತು ಯೋಜನೆಗಳ ವಿವರ ದಾಖಲಿಸಿರುವುದನ್ನು ಜಿಲ್ಲಾಧಿಕಾರಿಗಳಿಗೆ ರೈತರ ಸಮ್ಮುಖದಲ್ಲಿ ವಿವರಿಸಿದರು.
ಕಾರ್ಯಕ್ರಮದ ವೇಳೆ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕರು ಮತ್ತು ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರು ಆದ ಹೆತ್ತೂರು ದೇವರಾಜು, ಜಿಲ್ಲಾ ಪ್ರತಿನಿಧಿ ಸಂಪತ್ ಕುಮಾರ್, ಕಸಬಾ ಬೆಳೆಗಾರ ಸಂಘದ ಅಧ್ಯಕ್ಷ ಹೇಮರಾಜ್ ಮತ್ತು ಪದಾಧಿಕಾರಿಗಳು, ರೋಟರಿ ಸಂಸ್ಥೆಯ ಪದಾಧಿಕಾರಿ ಮತ್ತು ಸಹನಾ ಪ್ಲಾಂಟೇಷನ್ ಸಪ್ಲೈಸ್ ಮಾಲೀಕ ಶಶಿಧರ್, ಕೃಷಿ ಪರಿಕರ ಸಂಘದ ಅಧ್ಯಕ್ಷ ಅಜಿತ್ ಕುಮಾರ್, ರಾಜ್ ಕುಮಾರ್,ರೈತ ಮುಖಂಡ ರವಿ, ರೈತ ಉತ್ಪಾಧಕ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಜಿಲ್ಲಾಧಿಕಾರಿಗಳ ಕಾರ್ಯಕ್ರಮದಲ್ಲಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ತಹಸೀಲ್ದಾರ್ ಸುಪ್ರಿತಾ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗಂಗಾಧರನ್, ವಲಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಭಾನುಪ್ರಕಾಶ್, ತಾಂತ್ರಿಕ ಅಧಿಕಾರಿ ಅಜಿತ್ ಪ್ರಸಾದ್, ಬಿ ಇ ಓ ಪುಷ್ಪ,ತೋಟಗಾರಿಕೆ ಅಧಿಕಾರಿ ನಿತಿನ್, ರಾಜಸ್ವ ನಿರೀಕ್ಷಕ ಧಾನುಪ್ರಕಾಶ್, ಕಾಫಿ ಮಂಡಳಿ ಅಧಿಕಾರಿ ಮಂಜುಶ್ರೀ, ಹಾರ್ಲೆ ಪ್ರಯೋಗಾಲಯದ ತಜ್ಞೆ ಸತ್ಯ, ಎಸ್ಟೇಟ್ ವ್ಯವಸ್ಥಾಪಕ ಉನ್ನಿಕೃಷ್ಣ, ಆತ್ಮ ಯೋಜನೆಯ ವ್ಯವಸ್ಥಾಪಕರುಗಳು ಶ್ರವಣ್, ಸುಷ್ಮಾ ಮತ್ತು ರಾಥೋಡ್, ಸಿಬ್ಬಂದಿಗಳಾದ ರುದ್ರೇಶ್, ರೂಪಶ್ರೀ,ಗಣಿ, ದೊರೆಸ್ವಾಮಿ, ಮಹೇಶ್ ಮತ್ತು ಇತರರು ಹಾಜರಿದ್ದರು.

