ಆಲೂರು ತಾಲೂಕು ಪಟ್ಟಣದ ಕಲಿವೀರ್ ವಸತಿ ಪ್ರೌಢಶಾಲೆಯಲ್ಲಿ ರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಎಚ್ ಪಿ ವಿ ಲಸಿಕೆ ಉಚಿತವಾಗಿ ಶಾಲೆಯ ವಿದ್ಯಾರ್ಥಿನಿಯರಿಗೆ ಹಾಕಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ರೆಡ್ಡಿ ಅವರು ಕಾರ್ಯಕ್ರಮದ ಉದ್ದೇಶಿಸಿ ರೋಗ ಬರುವ ಮುನ್ನ ತಡೆಗಟ್ಟುವ ಕೆಲಸವನ್ನ ಪ್ರಾರಂಭ ರವರು ಮಾಡುತ್ತಿದ್ದಾರೆ ಜನ್ಮ ಕೊಟ್ಟ ತಾಯಿ ಮತ್ತು ದೇಶದ ಎರಡು ಋಣವನ್ನ ಈ ಕೆಲಸದ ಮುಖಾಂತರ ತೀರಿಸುತ್ತಿದ್ದಾರೆ ಅವರ ಈ ಕಾರ್ಯಕ್ಕೆ ನಾವು ಕೂಡ ಮುಂದಿನ ದಿನಗಳಲ್ಲಿ ಕೈಜೋಡಿಸುತ್ತೇವೆ ಎಂದು ಇತ್ತೀಚೆಗೆ ನಾವು ಕ್ಯಾನ್ಸರ್ ಕಾಯಿಲೆಗೆ ಹತ್ತಿರವಾಗುತ್ತಿರುವುದರಿಂದ ಆರೋಗ್ಯದ ಬಗ್ಗೆ ಅತ್ಯಂತ ಜಾಗೃತವಾಗಿರಬೇಕೆಂದು ಹೇಳಿದರು..
ಡಾಕ್ಟರ್ ದಿವ್ಯ ಮಲೆನಾಡು ನರ್ಸಿಂಗ್ ಹೋಮ್ ಶಿಬಿರದ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಉದ್ದೇಶಿಸಿ ದೇಶದಲ್ಲಿ ಈಗ ಪ್ರತಿ ಏಳು ನಿಮಿಷಕ್ಕೆ ಒಬ್ಬರಿಗೆ ಗರ್ಭಕೋಲ ಕ್ಯಾನ್ಸರ್ ನಿಂದ ಸಾವು ಬರುತ್ತಿದೆ ಈ ಕ್ಯಾನ್ಸರ್ ಅನ್ನ ಈ ಎಚ್ ಪಿ ವಿ ವ್ಯಾಕ್ಸಿ ಮುಖಾಂತರ ತಡೆಗಟ್ಟಬಹುದಾಗಿದೆ ಯಾರು ಆತಂಕ ಪಡದೆ ಈ ವ್ಯಾಕ್ಸಿನ್ ಬಗ್ಗೆ ನಂಬಿಕೆಯನ್ನು ಇಟ್ಟು ವೈದ್ಯ ಲೋಕ ಕೆಲಸ ಮಾಡುತ್ತಿದೆ ಎಲ್ಲರೂ ಕೂಡ ತಮ್ಮ ಆರೋಗ್ಯದ ಭವಿಷ್ಯಕ್ಕಾಗಿ ಪಡೆದುಕೊಳ್ಳಿ ಹಿಂದೆ ಒಂದು ಕಾಲದಲ್ಲಿ ಪೋಲಿಯೋ ಡ್ರಾಪ್ಸ್ ಬಗ್ಗೆ ಕೂಡ ಆತಂಕ ಪಡುತ್ತಿದ್ದರು ತದನಂತರ ಸಾರ್ವಜನಿಕರು ಗ್ರಾಮೀಣವಾಗಿ ಸಂಪೂರ್ಣ ವಿಶ್ವಾಸವನ್ನು ಇಟ್ಟು ಪೋಲಿಯೋ ಡ್ರಾಪ್ಸ್ ಪಡೆದಾದ ಮೇಲೆ ಪೋಲಿಯೋ ಮುಕ್ತ ಭಾರತವಾಗಿದೆ ಇದೇ ಮಾದರಿಲ್ಲಿ ಮುಂದಿನ ದಿನಗಳಲ್ಲಿ ಹೇಮಂತ್ ಕುಮಾರ್ ರೀತಿ ಹೆಚ್ಚು ಜನ ಮುಂದೆ ಬಂದರೆ ಗರ್ಭ ಕೊರಳ ಕ್ಯಾನ್ಸರನ್ನ ದೇಶದಲ್ಲಿ ಮುಕ್ತ ಮಾಡಬಹುದು ಎಂದು ನುಡಿದರು ಶಾಲೆಯ ಮುಖ್ಯೋಪಾಧ್ಯರು ವಸುದೇವ ರವರು ಶೀಬಿರವನ್ನ ಉದ್ದೇಶಿಸಿ ಹೇಮಂತ್ ಕುಮಾರ್ ಅದ ನಮ್ಮ ಹಳೆಯ ಶಾಲೆಯ ವಿದ್ಯಾರ್ಥಿಯಾಗಿರುವುದು ನಮ್ಮ ಹೆಮ್ಮೆಯ ವಿಷಯ ಅವರು ತಮ್ಮ ತಾಯಿ ಹೆಸರಿನಲ್ಲಿ ಸಂಸ್ಥೆಯನ್ನು ತೆರೆದು ಆಲೂರು ತಾಲೂಕುಗೆ ಸಮಾಜಕ್ಕೆ ಕೊಡುತ್ತಿರುವ ಕೊಡುಗೆ ನೋಡಿದರೆ ನಮ್ಮ ಶಾಲೆಗೆ ಒಂದು ಕೀರ್ತಿ ಎಂದು ಭಾವಿಸುತ್ತೇವೆ ಹೇಮಂತ್ ಕುಮಾರ್ ಅವರನ್ನ ಅಭಿನಂದಿಸಿದರು…
ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೆಗೌಡರು ಸಭೆಯನ್ನು ಉದ್ದೇಶಿಸಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಹೇಮಂತ್ ಕುಮಾರ್ ಅವರು 5 ಕ್ಯಾಂಪ್ಗಳನ್ನ ವ್ಯಾಕ್ಸಿನೇಷನ್ ಹಾಕುವುದು ಮುಖಾಂತರ ಯಶಸ್ವಿ ಮಾಡಿದ್ದಾರೆ ಇದನ್ನ ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು ತಮ್ಮ ಆರೋಗ್ಯ ದೃಷ್ಟಿಯಿಂದ ವಿದ್ಯಾರ್ಥಿನಿಯರು ಜಾಗೃತಿ ವಹಿಸಬೇಕೆಂದರು…
ಹೇಮಂತ್ ಕುಮಾರ್ ಅವರು ಮಾತನಾಡಿ ಇಂತಹ ಕಾರ್ಯಕ್ರಮಗಳಿಗೆ ವೈದ್ಯರ ಸಹಕಾರ ಬಹಳ ಅಗತ್ಯವಾಗಿರುತ್ತದೆ ಅದನ್ನು ನಿರಂತರವಾಗಿ ಮಲೆನಾಡು ನರ್ಸಿಂಗ್ ಹೋಮ್ ವೈದ್ಯರಾದ ಡಾಕ್ಟರ್ ಸಾವಿತ್ರಿ ಅವರ ತಂಡ ಸಂಪೂರ್ಣವಾಗಿ ಸಹಕರಿಸಿರುವುದಕ್ಕೆ ಅಭಿನಂದಿಸುತ್ತೇನೆ… ಈಗಿನ ರಾಜಕಾರಣಿಗಳು ರಾಜಕೀಯ ತನ್ನ ಭವಿಷ್ಯಕ್ಕಾಗಿ ಫ್ಲೆಕ್ಸ್ ಮತ್ತು ಬೇರೆ ಬೇರೆ ಕಾರ್ಯಕ್ರಮಗಳನ್ನ ಹಣವನ್ನು ಖರ್ಚು ಮಾಡುತ್ತಾರೆ ಹೊರತು ಇಂಥ ಕಾರ್ಯಕ್ರಮಕ್ಕೆ ಅವರ ಹೆಸರಿನಲ್ಲಿ ಮಕ್ಕಳಿಗೆ ಹಾಕಿಸಿದರೆ ಸಮಾಜ ಸೇವೆಯನ್ನು ಮಾಡಬಹುದು ಎಂದರು..
. ಈ ದಿನ ಅರಕಲಗೂಡಿನ ಮಾಜಿ ಶಾಸಕರಾದ ಎ ಟಿ ರಾಮಸ್ವಾಮಿಯವರ ಹುಟ್ಟುಹಬ್ಬದ ಪ್ರಯುಕ್ತ ವ್ಯಾಕ್ಸಿನೇಷನ್ ಉಚಿತವಾಗಿ ನಾನು ಓದಿರುವ ಶಾಲೆಗೆ ಹಾಕಿಸಿದ್ದೇನೆ ಎ ಟಿ ರಾಮಸ್ವಾಮಿಯವರು ಅರಕಲಗೂಡು ನಲ್ಲಿ ಮೂರು ಸಾವಿರ ಮಕ್ಕಳಿಗೆ ಈಗಾಗಲೇ ಹಾಕಿಸಿ ನಮ್ಮ ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಮುಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದಲ್ಲೂ ಯಾವುದೇ ಪಕ್ಷದ ರಾಜಕೀಯ ವ್ಯಕ್ತಿಗಳು ಈ ಮಾದರಿಯ ಕಾರ್ಯಕ್ರಮಗಳಿಗೆ ತಮ್ಮ ವೈಯಕ್ತಿಕ ದುಡಿಮೆ ಹಣವನ್ನು ಖರ್ಚು ಮಾಡಿ ಸಮಾಜ ಸೇವೆ ಮಾಡಬೇಕೆಂದು ಮನವಿ ಮಾಡಿದರು ಈ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯ ಸದಸ್ಯ ಮರ್ಸು ಧರ್ಮ ರವರು ಸಹ ಭಾಗವಹಿಸಿದರು.

