ಸಕಲೇಶಪುರ: ಸಕಲೇಶಪುರದ ಯುವ ಪ್ರತಿಭೆ ರಕ್ಷಿತ್ ಅವರ ಸಾಮಾಜಿಕ ಸೇವೆಗೆ ಡಾಕ್ಟರೇಟ್ ಪದವಿ ಲಭಿಸಿದೆ,
ರಕ್ಷಿತ್ ಅವರು ಈ ಹಿಂದೆ ಕೇರಳದ ವಯನಾಡುನಲ್ಲಿ ಸಂಭವಿಸಿದ ಅತಿವೃಷ್ಟಿ ಪ್ರಳಯದಿಂದ ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ನಿರಾಶ್ರಿತರಿಗೆ ಉಚಿತ ನೆರವು ಸೇವೆ ಒದಗಿಸಿ ಹಾಗೂ ಬಡ ಕುಟುಂಬಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆಗಳನ್ನು ಒದಗಿಸುವುದರಿಂದ ಮತ್ತು ಆಸ್ಪತ್ರೆಗಳ ನಡುವೆ ತುರ್ತು ಶಿಶುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದರಿಂದ ಹಿಡಿದು ನೂರಾರು ಮುಗ್ಧ ಜೀವಗಳನ್ನು ಉಳಿಸಲು ಸಹಾಯ ಮಾಡುವವರೆಗೆ ರಕ್ಷಿತ್ ಅವರು ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ವಯನಾಡಿನಲ್ಲಿ ಪ್ರವಾಹದ ಸಮಯದಲ್ಲಿ, ಮನೆಗಳನ್ನು ಕಳೆದುಕೊಂಡ ಜನರಿಗೆ ಆಹಾರ, ನೀರು ಮತ್ತು ಬಟ್ಟೆಗಳನ್ನು ವಿತರಿಸುವ ಮೂಲಕ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿದ ಸಣ್ಣ ದಯೆಯ ಕಾರ್ಯಗಳು ಸಹ ಯಾರೊಬ್ಬರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತವೆ ಎಂಬ ಅವರ ನಂಬಿಕೆಯನ್ನು ಈ ಅನುಭವಗಳು ಬಲಪಡಿಸಿವೆ ಎಂದು ಹರ್ಷವನ್ನು ಹಂಚಿಕೊಂಡಿದ್ದಾರೆ.
ಈ ಡಾಕ್ಟರೇಟ್ ಪದವಿ ಸಿಗುವುದಕ್ಕೆ ಮುಖ್ಯ ಕಾರಣ ಅಖಿಲ ಕರ್ನಾಟಕ ರೋಡ್ ಸೆಫ್ಟಿ ಆಂಬುಲೆನ್ಸ್ ಗ್ರೂಪ್ ನ ರಾಜ್ಯ ಆರೋಗ್ಯ ಅಧ್ಯಕ್ಷರು ಸುಹೇಬ್ ಹಾಗೂ ಶಾಸ್ತ ಆಂಬುಲೆನ್ಸ್ ಮಾಲೀಕರಾದ ಸದಾನಂದ ಸಕಲೇಶಪುರ ಎಂದು ಡಾ. ರಕ್ಷಿತ್ ರವರು ತಿಳಿಸಿದ್ದಾರೆ.
ಡಾಕ್ಟರೇಟ್ ಪದವಿ ಸಿಕ್ಕಿರುವದಕ್ಕೆ ತಂದೆ, ತಾಯಿ ಹಾಗೂ ಅಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.



