ಆಲೂರು: ನಿಷೇಧ ಇದ್ದರೂ ಪ್ಲಾಸ್ಟಿಕ್ ಮಾರಾಟ ಮಾಡುತ್ತಿದ್ದ ಪಟ್ಟಣದ ಐದು ಅಂಗಡಿಗಳ ಮೇಲೆ ಶುಕ್ರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆಸಿ 20 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 3 ಸಾವಿರ ದಂಡ ವಸೂಲಿ ಮಾಡಿದ್ದಾರೆ.
ಆಲೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ, ಪ್ರತಿದಿನವೂ ಧ್ವನಿವರ್ಧಕದ ಮೂಲಕ ಪ್ಲಾಸ್ಟಿಕ ನಿಷೇಧ ಮತ್ತು ಅದರ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಆದರೂ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಪೂರ್ಣವಾಗಿ ನಿಂತಿಲ್ಲ ಅದನ್ನ ತಡೆಗಟ್ಟುವ ನಿಟ್ಟಿನಲ್ಲಿ ಸಿಬ್ಬಂದಿಗಳೊಂದಿಗೆ ಪಟ್ಟಣದ ಕೆಲ ಅಂಗಡಿಗಳ ಮೇಲೆ ತಾಳಿ ನಡೆಸಿದಾಗ ಸುಮಾರು 20 ಕೆಜಿ ಎಷ್ಟು ಪ್ಲಾಸ್ಟಿಕ್ ಸಿಕ್ಕಿದ್ದು 3000 ರೂ ದಂಡವನ್ನು ವಿಧಿಸಲಾಗಿದೆ ಜೊತೆಗೆ ಇನ್ನೂ ಮುಂದೆ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ಮಾಡಿದರೆ ಅಂತವರ ವಿರುದ್ಧ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು.
ಸದ್ಯ ಬಹುತೇಕ ಬೇಕರಿ ಹಣ್ಣಿನ ತರಕಾರಿ ದಿನಸಿ ಅಂಗಡಿ ಹೋಟೆಲ್ ಗಳಲ್ಲಿ ಕಳಪೆ ಮಟ್ಟದ ಪ್ಲಾಸ್ಟಿಕ್ ಉಪಯೋಗ ಮಾಡುತ್ತಿದ್ದರೆ ಅದನ್ನು ನಿಲ್ಲಿಸದೆ ಹೋದರೆ ಅಂತ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ ಸಿಬ್ಬಂದಿಗಳಾದ ಪುರುಷೋತ್ತಮ್ ರವಿ. ಹಾಗೂ ಇನ್ನಿತರ ಸಿಬ್ಬಂದಿಯವರು ಹಾಜರಿದ್ದರು.
