ಸಕಲೇಶಪುರ ಕವನ್ ಕಾಫಿ ವರ್ಕ್ಸ್ ಗೆ ಕಳ್ಳರು ನುಗ್ಗಿದ್ದಾರೆ
ನಿನ್ನೆ ರಾತ್ರಿ ಅಂಗಡಿಯ ಹಿಂಭಾಗದಿಂದ ಮೇಲಕ್ಕೆ ಹತ್ತಿದ ಕಳ್ಳರು ಬಳಿಕ ಅಂಗಡಿಯ ಮುಂಭಾಗಕ್ಕೆ ಬಂದು ಬೀಗ ಮುರಿದಿದ್ದಾರೆ.
50 ಕೆ ಜಿ ಕಾಳು ಮೆಣಸು, 10 ಕೆಜಿ ಬಾದಾಮಿ,10 ಕೆಜಿ ಗೋಡಂಬಿ, 10 ಕೆ ಜಿ ಪಿಸ್ತಾ, 7 ಕೆ ಜಿ ಏಲಕ್ಕಿ ಹಾಗೂ ನಗದು ಕಳ್ಳತನ ಆಗಿದೆ.
ಈ ಅಂಗಡಿಯಲ್ಲಿ 5 ನೇ ಬಾರಿಗೆ ಕಳ್ಳತನ
ಕಳ್ಳತನ ವಿಚಾರದಲ್ಲಿ ಕವನ್ ಕಾಫಿ ವರ್ಕ್ಸ್ ಮಾಲಕ ಅಶೋಕ್ ರವರು ನತ ದೃಷ್ಟರು.
ಅವರ ಅಂಗಡಿಯಲ್ಲಿ 5 ಬಾರಿ ಕಳ್ಳತನ ಆಗಿದೆ. ಪ್ರತಿ ಬಾರಿಯೂ ಅಂಗಡಿ ಖಾಲಿ ಮಾಡುವ ಕಳ್ಳರು ಅವರ ಬದುಕನ್ನೇ ಕಸಿದಿದ್ದಾರೆ.
ಈ ರೀತಿ ಕಳ್ಳತನ ಆದರೆ ಅವರ ಪರಿಸ್ಥಿತಿ ಯಾವ ರೀತಿ ಇದ್ದೀತು. ಎಲ್ಲರೂ ಆಲೋಚನೆ ಮಾಡಬೇಕಾದ ವಿಚಾರ. ಅಷ್ಟರ ಮಟ್ಟಿಗೆ ಸಂಕಷ್ಟ ಪರಿಸ್ಥಿತಿ ಅವರದ್ದು.
ತಾಲೂಕು ವರ್ತಕರ ಸಂಘದ ಅಧ್ಯಕ್ಷರು ತೀವ್ರವಾಗಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಮುಂದಿನ ದಿನಗಳಲ್ಲಿ ಸಂಘವು ತಂಡವನ್ನು ರಚಿಸಿಕೊಂಡು ತಾವೇ ರಾತ್ರಿ ತಮ್ಮ ಅಂಗಡಿಗಳ ರಕ್ಷಣೆಗೆ ಗಸ್ತು ತಿರುಗುವ ತೀರ್ಮಾನಕ್ಕೆ ಬಂದಿರುತ್ತದೆ ಎಂದು ಸಂಘದ ಅಧ್ಯಕ್ಷ ಮಧು ಕುಮಾರ್ ತಿಳಿಸಿದ್ದಾರೆ



