ಆಲೂರು ತಾಲೂಕು ಬೆಳಮೆ ಗ್ರಾಮದ ಊರ ಮುಂದಿನ ಕೆರೆಯಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂವು ತರಲು ಹೋಗಿ ಚಿಕ್ಕಬಿಕ್ಕೋಡು ಗ್ರಾಮದ ದೇವರಾಜು ಎಂಬುವರು ಮೃತಪಟ್ಟಿದ್ದಾರೆ.
ಇಂದು ಮದ್ಯಾಹ್ನ ಈ ಘಟನೆ ಸಂಭವಿಸಿದೆ. ಕೆರೆಯಲ್ಲಿ ಕೆಸರಿಗೆ ಸಿಲುಕಿದ ಅವರು ಮೇಲಕ್ಕೆ ಬರಲಾಗದೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಆಲೂರು ಪೊಲೀಸರು ಹಾಗೂ ಅಗ್ನಿಶಾಮಕದಳದವರು ಭೇಟಿ ನೀಡಿ ಶವಕ್ಕಾಗಿ ಶೋಧ ನಡೆಸಿದ್ದಾರೆ

