ಸಕಲೇಶಪುರ ಲಯನ್ಸ್ ಸಭಾಂಗಣದಲ್ಲಿ ಹಿಂದೂ ಮುಸ್ಲಿಂ ಶಾಂತಿ ಸಭೆ.:-
ಸಕಲೇಶಪುರ :- ತಾಲ್ಲೂಕಿನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಇಂದು
ದಿನಾಂಕ 07-8-25 ರಂದು ಬೆಳಿಗ್ಗೆ 12.45ಕ್ಕೆ ಲಯನ್ಸ್ ಹಾಲ್ ಸಕಲೇಶಪುರ ಟೌನ್ ನಲ್ಲಿ ಹಿಂದೂ ಮುಸ್ಲಿಂ ಶಾಂತಿ ಸಭೆಯನ್ನು ಏರ್ಪಡಿಸಲಾಗಿದೆ.
ಸಭೆಯಲ್ಲಿ ಗಣೇಶ ಪ್ರತಿಷ್ಠಾಪನೆಯ ಪ್ರಯುಕ್ತ ಹಿಂದೂ ಬಾಂಧವರು ಕೈಗೊಳ್ಳಬೇಕಾದ ನಿಯಮಗಳು ಹಾಗೂ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಬಾಂಧವರು ಕೈಗೊಳ್ಳಬೇಕಾದ ನಿಯಮಗಳನ್ನು ಸಕಲೇಶಪುರ ತಾಲ್ಲೂಕು ವೃತ್ತ ನಿರೀಕ್ಷರಾದ ನಿರಂಜನ್ ಕುಮಾರ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಿಕರು ಪ್ರಸನ್ನ ಅವರಿಂದ ಮಾಹಿತಿ ನೀಡಲಾಗುತ್ತದೆ.
ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ಬಾಂಧವರು ಹಾಗೂ ಮುಸ್ಲಿಂ ಬಾಂಧವರು ಭಾಗಿಯಾಗಿ ಹಬ್ಬದ ಆಚರಣೆಯಲ್ಲಿ ಕೈಗೊಳ್ಳಬೇಕಾ ನಿಯಮಗಳನ್ನು ತಿಳಿದುಕೊಳ್ಳಬೇಕಾಗಿ ಸಕಲೇಶಪುರ ಪೊಲೀಸ್ ಇಲಾಖೆಯಿಂದ ತಿಳಿಸಿದ್ದಾರೆ.
